×
Ad

ಏರ್ ಇಂಡಿಯಾ ವಿಮಾನ ದುರಂತ | ವಿಮಾನದ ಅವಶೇಷಗಳಿಂದ ಡಿಜಿಟಲ್ ವಿಡಿಯೋ ರೆಕಾರ್ಡರ್ ಪತ್ತೆ

Update: 2025-06-13 14:27 IST

Photo credit: newsx.com

ಹೊಸದಿಲ್ಲಿ: ಅಹಮದಾಬಾದ್‌ನಲ್ಲಿ ಗುರುವಾರ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದ ಅವಶೇಷಗಳಿಂದ ಗುಜರಾತ್ ಎಟಿಎಸ್ ಡಿಜಿಟಲ್ ವಿಡಿಯೋ ರೆಕಾರ್ಡರ್ (ಡಿವಿಆರ್) ಅನ್ನು ಪತ್ತೆ ಹಚ್ಚಿದೆ.

ಈ ಕುರಿತು ಪ್ರತಿಕ್ರಿಯಿಸಿದ ಗುಜರಾತ್ ಎಟಿಎಸ್ ಸಿಬ್ಬಂದಿಯೊಬ್ಬರು, "ಇದು ನಾವು ಅವಶೇಷಗಳಿಂದ ಡಿವಿಆರ್ ವಶಪಡಿಸಿಕೊಂಡಿದ್ದೇವೆ. ಎಫ್‌ಎಸ್‌ಎಲ್ ತಂಡ ಶೀಘ್ರದಲ್ಲೇ ಇಲ್ಲಿಗೆ ಬರಲಿದೆ" ಎಂದರು.

ವಿಮಾನದ ಬ್ಲಾಕ್ ಬಾಕ್ಸ್ ಸಿಕ್ಕಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಗುಜರಾತ್ ಎಟಿಎಸ್ ಈ ಸ್ಪಷ್ಟನೆ ನೀಡಿದೆ. ವಿಮಾನ ದುರಂತದ ಸಂಭಾವ್ಯ ಕಾರಣಗಳ ಪತ್ತೆಗೆ ಬ್ಲಾಕ್ ಬಾಕ್ಸ್ ಪ್ರಮುಖ ಆಧಾರವಾಗಲಿದೆ. ಬ್ಲ್ಯಾಕ್ ಬಾಕ್ಸ್ ನಲ್ಲಿ ಪೈಲೆಟ್ ಗಳ ನಡುವಿನ ಸಂಭಾಷಣೆ ಮತ್ತು ಏರ್ ಟ್ರಾಫಿಕ್ ಕಂಟ್ರೋಲರ್ ನಡುವೆ ಮೇಡೆ ಕರೆಯೂ ದಾಖಲಾಗಿರುತ್ತದೆ. ಬ್ಲಾಕ್ ಬಾಕ್ಸ್ ಸಿಕ್ಕಬಳಿಕ ಅಪಘಾತಕ್ಕೆ ನೈಜ ಕಾರಣಗಳು ಹೊರಬರಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News