×
Ad

"ನಾನು ಜೀವಂತವಾಗಿದ್ದೇನೆ” ಎಂದು ವೀಡಿಯೋ ಪೋಸ್ಟ್ ಮಾಡಿದ ಪೂನಂ ಪಾಂಡೆ!

Update: 2024-02-03 12:54 IST

ಪೂನಂ ಪಾಂಡೆ | Photo: NDTV 

ಹೊಸದಿಲ್ಲಿ : ರೂಪರ್ಶಿ ಮತ್ತು ರಿಯಾಲಿಟಿ ಶೋ ತಾರೆ ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್‌ನಿಂದ ನಾನು ಸಾವನ್ನಪ್ಪಿಲ್ಲ ಎಂದು ಘೋಷಿಸಿದ್ದಾರೆ.

ಪೂನಂ ಪಾಂಡೆ ಅವರ ಮ್ಯಾನೇಜರ್, ಪಾಂಡೆ ಗರ್ಭಕಂಠದ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ ಒಂದು ದಿನದ ನಂತರ Instagram ನಲ್ಲಿ ಪೂನಂ ಪಾಂಡೆಯವರ ಪ್ರಕಟಣೆ ಬಂದಿದೆ.

"ನಾನು ಜೀವಂತವಾಗಿದ್ದೇನೆ. ನಾನು ಗರ್ಭಕಂಠದ ಕ್ಯಾನ್ಸರ್‌ನಿಂದ ಸಾಯಲಿಲ್ಲ. ದುರದೃಷ್ಟವಶಾತ್, ಗರ್ಭಕಂಠದ ಕ್ಯಾನ್ಸರ್‌ನಿಂದ ಪ್ರಾಣ ಕಳೆದುಕೊಂಡ ನೂರಾರು ಮತ್ತು ಸಾವಿರಾರು ಮಹಿಳೆಯರ ಬಗ್ಗೆ ನಾನು ಹೇಳಲಾರೆ." ಎಂದು ತಮ್ಮ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ಪೂನಂ ಪಾಂಡೆ ಕ್ಯಾನ್ಸರ್ ನಿಂದ ದಿಢೀರ್ ಸಾವಿನ ಸುದ್ದಿ, ಜನರಲ್ಲಿ ಆತಂಕವುಂಟುಮಾಡಿತ್ತು. ಅಧಿಕೃತ ಮಾಹಿತಿ ಜಾಲತಾಣವಾದ ವೀಕಿಪೀಡಿಯವು ಕೂಡ ಪೂನಂ ಸಾವಿನ ದಿನಾಂಕವನ್ನು ತನ್ನ ಪೋಸ್ಟ್ ನಲ್ಲಿ ಸೇರಿಸಿತ್ತು.

Full View

Photo : en.Wikipedia.org

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News