×
Ad

ಅಸ್ಸಾಂ: 11 ಕೋಟಿ ರೂ. ಮೌಲ್ಯದ ಹೆರಾಯಿನ್ ವಶ, 3 ಮಂದಿ ಬಂಧನ

Update: 2023-07-02 12:17 IST

ಗುವಾಹಟಿ (ಅಸ್ಸಾಂ): ಅಸ್ಸಾಂ ಪೊಲೀಸ್ ನ ವಿಶೇಷ ಕಾರ್ಯಪಡೆ (ಎಸ್ ಟಿಎಫ್) ಹಾಗೂ ಕಮ್ರೂಪ್ ಜಿಲ್ಲಾ ಪೊಲೀಸರು ಶನಿವಾರ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಸುಮಾರು 11 ಕೋಟಿ ರೂ. ಮೌಲ್ಯದ ಭಾರೀ ಪ್ರಮಾಣದ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.

ರಹಸ್ಯ ಮಾಹಿತಿಯ ಆಧಾರದ ಮೇಲೆ ಕಾಮ್ರೂಪ್ ಜಿಲ್ಲಾ ಪೊಲೀಸರು ಶನಿವಾರ ತಡರಾತ್ರಿ ಕಾರ್ಯಾಚರಣೆ ನಡೆಸಿ ವಾಹನದಿಂದ 700 ಗ್ರಾಂ ಹೆರಾಯಿನ್ ಅನ್ನು ವಶಪಡಿಸಿಕೊಂಡಿದ್ದಾರೆ ಹಾಗೂ ಮೂವರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ ಎಂದು ಎಸ್ ಟಿಎಫ್ ನ ಡಿಐಜಿ ಪಾರ್ಥ ಸಾರಥಿ ಮಹಂತ ಅವರು ಎಎನ್ಐಗೆ ತಿಳಿಸಿದ್ದಾರೆ

ಮತ್ತೊಂದೆಡೆ, ಜೂನ್ 25 ರಂದು ಪೊಲೀಸರು ಇಬ್ಬರನ್ನು ಬಂಧಿಸಿದ ಎಸ್ ಟಿಎಫ್ ಡ್ರಗ್ಸ್ ಪ್ರಕರಣದಲ್ಲಿ, ಅಪಘಾತಕ್ಕೀಡಾದ ವಾಹನದ ಹಿಡನ್ ಚೇಂಬರ್ ನಿಂದ 500 ಗ್ರಾಂ ತೂಕದ 40 ಸೋಪ್ ಕೇಸ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದಕ್ಕೂ ಮುನ್ನ ಜೂನ್ 25 ರಂದು ಹಜೋ ಮತ್ತು ಗುವಾಹಟಿಯಿಂದ ಎಸ್ ಟಿಎಫ್ (ವಿಶೇಷ ಕಾರ್ಯಪಡೆ) 2.2 ಕೆಜಿ ಹೆರಾಯಿನ್ ವಶಪಡಿಸಿಕೊಂಡಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News