ಕೊಲಂಬಿಯಾ: ವಿಮಾನ ಪತನ; 5 ರಾಜಕೀಯ ಮುಖಂಡರ ಮೃತ್ಯು
Update: 2023-07-20 23:06 IST
ಬೊಗೊಟ್: ಮಧ್ಯ ಕೊಲಂಬಿಯಾದ ಸ್ಯಾನ್‍ಲೂಯಿಸ್ ಡಿಗಸೆನೊ ಎಂಬಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದಲ್ಲಿ ಐದು ಮಂದಿ ರಾಜಕಾರಣಿಗಳು ಹಾಗೂ ಪೈಲಟ್ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಕೊಲಂಬಿಯಾದ ಈ ಹಿಂದಿನ ಅಧ್ಯಕ್ಷ ಅಲ್ವಾರೊ ಉರಿಬೆಯ ಸೆಂಟ್ರೊ ಡೆಮೊಕ್ರಟಿಕೊ ಪಕ್ಷದ ಐವರು ಪ್ರಮುಖ ಮುಖಂಡರು ದುರಂತದಲ್ಲಿ ಮೃತಪಟ್ಟಿದ್ದಾರೆ. ಮಾಜಿ ಸೆನೆಟರ್ ನೊಹೊರ ತೊವರ್, ಡಿಪಾರ್ಟ್‍ಮೆಂಟಲ್ ಶಾಸಕ ಡಿಮಸ್ ಬರೆರೊ, ಗವರ್ನರ್ ಹುದ್ದೆಯ ಅಭ್ಯರ್ಥಿ ಎಲಿಯೊಡೊರೊ ಅಲ್ವಾರೆಝ್ ಮತ್ತು ವಿಲಾವಿಸೆಂಸಿಯೊ ಮುನಿಸಿಪಲ್ ಕೌನ್ಸಿಲರ್ ಆಸ್ಕರ್ ರಾಡ್ರಿಗಸ್ ಹಾಗೂ ವಿಮಾನದ ಪೈಲಟ್ ಮೃತಪಟ್ಟವರು.
ವಿಲಾವಿಸೆಂಸಿಯೊ ನಗರದಿಂದ ರಾಜಧಾನಿ ಬೊಗೊಟಕ್ಕೆ ಪ್ರಯಾಣಿಸುತ್ತಿದ್ದ ಸಂದರ್ಭ ವಿಮಾನ ಪತನಗೊಂಡಿದೆ ಎಂದು ವರದಿ ಹೇಳಿದೆ.