×
Ad

ನ.6 -9: ಮಂಜೇಶ್ವರ ಮಳ್‌ಹರ್ ನಲ್ಲಿ ʼಅಲ್ ಖಲಂʼ ಫೆಸ್ಟ್

Update: 2025-10-30 12:20 IST

ಉಳ್ಳಾಲ: ಮಂಜೇಶ್ವರದಲ್ಲಿ ಕಾರ್ಯಾಚರಿಸುತ್ತಿರುವ ಮಳ್‌ಹರು ನೂರಿಲ್ ಇಸ್ಲಾಮಿತ್ತಅಲೀಮಿ ಇದರ ಅಧೀನದಲ್ಲಿ 'ಅಲ್ ಖಲಂʼ ವಿದ್ಯಾರ್ಥಿ ಫೆಸ್ಟ್ ಕಾರ್ಯಕ್ರಮವು ನ.6 ರಿಂದ 9 ರವರೆಗೆ ಬುಖಾರಿ ಕ್ಯಾಂಪಸ್‌ನಲ್ಲಿ ನಡೆಯಲಿದೆ ಎಂದು ಮಳ್‌ಹರ್ ವಿದ್ಯಾ ಸಂಸ್ಥೆ ವಿದ್ಯಾರ್ಥಿ ಫಾಝಿಲ್ ಮಂಗಳೂರು ಹೇಳಿದರು.

ಅವರು ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನವೆಂಬರ್ 6ರಂದು ಸಂಜೆ 5 ಗಂಟೆಗೆ ಮಳ್‌ಹರ್ ದ‌ಅವಾ ಕಾಲೇಜಿನ ಪ್ರಾಧ್ಯಾಪಕ ಸಯ್ಯಿದ್ ಮುಸ್ತಫಾ ಸಿದ್ದೀಖಿ ಅಲ್ ಬುಖಾರಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮಳ್‌ಹರ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ಸಅದಿ ಅಲ್ ಬುಖಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮಳ್‌ಹರ್ ದ‌ಅವಾ ಕಾಲೇಜು ಅಡ್ಮಿನಿಸ್ಟ್ರೇಟೇಟಿವ್ ಹಸನ್ ಸ‌ಅದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಜೇಶ್ವರ ಕ್ಷೇತ್ರದ ಶಾಸಕ ಎಕೆಎಂ ಅಶ್ರಫ್ ಮುಖ್ಯ ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕೇರಳದ ಖ್ಯಾತ ಗಾಯಕ ಹಾಫಿಲ್ ಮುಬಶ್ಶಿರ್ ಅದನಿ ಮತ್ತು ಅವರ ತಂಡ ಮದ್‌ಹ್ ಮಜ್‌ಲಿಸ್‌ಗೆ ನೇತೃತ್ವ ವಹಿಸಲಿದ್ದಾರೆ ಎಂದರು. 

ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೂರು ತಂಡಗಳು ಇದ್ದು, 300ಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು ಭಾಗವಹಿಸಲಿದ್ದಾರೆ. 150ಕ್ಕೂ ಹೆಚ್ಚು ಸ್ಪರ್ಧೆಗಳು ನಡೆಯಲಿದ್ದು, ನಾಲ್ಕು ದಿನಗಳ ಕಾಲ ರಾತ್ರಿ ವೇಳೆ ಐದು ಭಾಷೆಗಳಲ್ಲಿ ನಡೆಯಲಿದೆ ಎಂದರು.

ನ.9ಭಾನುವಾರ 9:00 ಗಂಟೆಗೆ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ಈ ಸಮಾರಂಭದಲ್ಲಿ ಮಳ್‌ಹರು ನೂರಿಲ್ ಇಸ್ಲಾಮಿತ್ತಅಲೀಮಿಯ ಅಧ್ಯಕ್ಷ ಸಯ್ಯಿದ್ ಅಬ್ದುರ್ರಹ್ಮಾನ್ ಶಹೀರ್ ಅಲ್‌ ಬುಖಾರಿ ದಿಕ್ಸೂಚಿ ಭಾಷಣವನ್ನು ನಡೆಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹರ್ಷಾದ್ ಚಿಕ್ಕಮಗಳೂರು, ಯಾಸೀರ್ ಸುಳ್ಯ, ಸಹಲ್ ಬೆಳ್ತಂಗಡಿ, ಸಿದ್ದೀಕ್ ದೈಗೋಳಿ , ಸಅದ್ ಪುತ್ತೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News