×
Ad

ಪಾಕಿಸ್ತಾನ | ಭದ್ರತಾ ಸಲಹೆಗಾರರಾಗಿ ಗುಪ್ತಚರ ಮುಖ್ಯಸ್ಥ ಅಸೀಂ ಮಲಿಕ್ ನೇಮಕ

Update: 2025-05-01 08:59 IST

PC: x.com/OsintExperts

ಇಸ್ಲಾಮಾಬಾದ್: ಪಾಕಿಸ್ತಾನದ ಗುಪ್ತಚರ ವಿಭಾಗ ಐಎಸ್‌ಐನ ಮಹಾ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ಮುಹಮ್ಮದ್ ಅಸೀಂ ಮಲಿಕ್ ಅವರನ್ನು ರಾಷ್ಟ್ರೀಯ ಭದ್ರತೆ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ ಎಂದು ‘ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.

ಭಾರತ ಹಾಗೂ ಪಾಕಿಸ್ತಾನ ನಡುವೆ ಉದ್ವಿಗ್ನ ಸ್ಥಿತಿ ಹೆಚ್ಚುತತಿರುವಾಗಲೇ ಅಸೀಂ ಅವರಿಗೆ ಭದ್ರತಾ ಸಲಹೆಗಾರರಾಗಿ ಹೆಚ್ಚುವರಿ ಹೊಣೆ ವಹಿಸಲಾಗಿದೆ. 2024ರ ಸೆಪ್ಟೆಂಬರ್‌ ನಲ್ಲಿ ಮುಹಮ್ಮದ್ ಅಸೀಂ ಅವರನ್ನು ಐಎಸ್‌ಐನ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿತ್ತು. ನೂತನ ನೇಮಕದ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗಿದೆ.

ಜನರಲ್ ಮುಹಮ್ಮದ್ ಅಸೀಂ ಮಲಿಕ್ ಅವರು ಐಎಸ್ಐ ಗೆ ಮುಖ್ಯಸ್ಥರಾಗುವ ಮುನ್ನ ಪಾಕಿಸ್ತಾನ ಸೇನೆಯಲ್ಲಿ ಸಹಾಯಕ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News