ಸಾಂದರ್ಭಿಕ ಚಿತ್ರ | PC : Image by djvstock on Magnific

ರಾಯಚೂರು : ರಾಜ್ಯ ಸರಕಾರವು ರಾಯಚೂರು ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲೆಯ ಎಂಟು ತಾಲ್ಲೂಕು ಪಂಚಾಯಿತಿಗಳ ಕ್ಷೇತ್ರಗಳಿಗೆ ಮೀಸಲಾತಿ ನಿಗದಿಪಡಿಸಿ ಆದೇಶ ಹೊರಡಿಸಿದೆ. ಈ ಹಿಂದೆ ಹೊರಡಿಸಿದ್ದ ಮೀಸಲಾತಿ ಅಧಿಸೂಚನೆಯನ್ನು ರದ್ದುಪಡಿಸಿ ಪರಿಷ್ಕೃತ ಮೀಸಲಾತಿ ಪ್ರಕಟಿಸಲಾಗಿದೆ.

ರಾಯಚೂರು ಜಿಲ್ಲಾ ಪಂಚಾಯಿತಿಯಲ್ಲಿ ಒಟ್ಟು 39 ಸ್ಥಾನಗಳಿದ್ದು, 20 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಪರಿಶಿಷ್ಟ ಜಾತಿಗೆ 9 ಸ್ಥಾನಗಳು, ಪರಿಶಿಷ್ಟ ಪಂಗಡಕ್ಕೆ 9 ಸ್ಥಾನಗಳು ಹಾಗೂ ಹಿಂದುಳಿದ ವರ್ಗ ‘ಅ’ಕ್ಕೆ ಒಂದು ಸ್ಥಾನ ಮೀಸಲಾಗಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ತಲಾ 9 ಸ್ಥಾನಗಳಲ್ಲಿ ಐದು ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಸಾಮಾನ್ಯ ವರ್ಗದ 20 ಸ್ಥಾನಗಳ ಪೈಕಿ 9 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.

ತಾಲ್ಲೂಕು ಪಂಚಾಯಿತಿ ಮೀಸಲಾತಿ

ರಾಯಚೂರು: ಒಟ್ಟು 23 ಸ್ಥಾನಗಳಿದ್ದು, 12 ಸ್ಥಾನಗಳು ಮಹಿಳೆಯರಿಗೆ ಮೀಸಲು. ಪರಿಶಿಷ್ಟ ಜಾತಿಗೆ 5, ಪರಿಶಿಷ್ಟ ಪಂಗಡಕ್ಕೆ 5, ಹಿಂದುಳಿದ ವರ್ಗ ‘ಅ’ಕ್ಕೆ ಒಂದು ಹಾಗೂ ಸಾಮಾನ್ಯ ವರ್ಗಕ್ಕೆ 12 ಸ್ಥಾನಗಳಿವೆ.

ಅರಕೇರಾ: ಒಟ್ಟು 13 ಸ್ಥಾನಗಳಲ್ಲಿ 7 ಮಹಿಳೆಯರಿಗೆ ಮೀಸಲು. ಪರಿಶಿಷ್ಟ ಜಾತಿಗೆ 2, ಪರಿಶಿಷ್ಟ ಪಂಗಡಕ್ಕೆ 4 ಹಾಗೂ ಸಾಮಾನ್ಯ ವರ್ಗಕ್ಕೆ 7 ಸ್ಥಾನಗಳು ನಿಗದಿಯಾಗಿವೆ.

ಸಿರವಾರ: ಒಟ್ಟು 11 ಸ್ಥಾನಗಳಿದ್ದು, 6 ಮಹಿಳೆಯರಿಗೆ ಮೀಸಲು. ಪರಿಶಿಷ್ಟ ಜಾತಿಗೆ 2, ಪರಿಶಿಷ್ಟ ಪಂಗಡಕ್ಕೆ 3 ಹಾಗೂ ಸಾಮಾನ್ಯ ವರ್ಗಕ್ಕೆ 6 ಸ್ಥಾನಗಳಿವೆ.

ಮಾನ್ವಿ: ಒಟ್ಟು 14 ಸ್ಥಾನಗಳಲ್ಲಿ 7 ಮಹಿಳೆಯರಿಗೆ ಮೀಸಲು. ಪರಿಶಿಷ್ಟ ಜಾತಿಗೆ 3, ಪರಿಶಿಷ್ಟ ಪಂಗಡಕ್ಕೆ 4 ಹಾಗೂ ಸಾಮಾನ್ಯ ವರ್ಗಕ್ಕೆ 7 ಸ್ಥಾನಗಳು ನಿಗದಿಯಾಗಿವೆ.

ಮಸ್ಕಿ: ಒಟ್ಟು 16 ಸ್ಥಾನಗಳಲ್ಲಿ 8 ಮಹಿಳೆಯರಿಗೆ ಮೀಸಲು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ತಲಾ 4 ಹಾಗೂ ಸಾಮಾನ್ಯ ವರ್ಗಕ್ಕೆ 8 ಸ್ಥಾನಗಳಿವೆ.

ಲಿಂಗಸುಗೂರು: ಒಟ್ಟು 22 ಸ್ಥಾನಗಳಲ್ಲಿ 11 ಮಹಿಳೆಯರಿಗೆ ಮೀಸಲು. ಪರಿಶಿಷ್ಟ ಜಾತಿಗೆ 5, ಪರಿಶಿಷ್ಟ ಪಂಗಡಕ್ಕೆ 5, ಹಿಂದುಳಿದ ವರ್ಗ ‘ಬ’ಕ್ಕೆ ಒಂದು ಹಾಗೂ ಸಾಮಾನ್ಯ ವರ್ಗಕ್ಕೆ 11 ಸ್ಥಾನಗಳಿವೆ.

ಸಿಂಧನೂರು: ಒಟ್ಟು 21 ಸ್ಥಾನಗಳಲ್ಲಿ 11 ಮಹಿಳೆಯರಿಗೆ ಮೀಸಲು. ಪರಿಶಿಷ್ಟ ಜಾತಿಗೆ 4, ಪರಿಶಿಷ್ಟ ಪಂಗಡಕ್ಕೆ 3, ಹಿಂದುಳಿದ ವರ್ಗ ‘ಅ’ಕ್ಕೆ 2, ಹಿಂದುಳಿದ ವರ್ಗ ‘ಬ’ಕ್ಕೆ ಒಂದು ಹಾಗೂ ಸಾಮಾನ್ಯ ವರ್ಗಕ್ಕೆ 11 ಸ್ಥಾನಗಳನ್ನು ನಿಗದಿಪಡಿಸಲಾಗಿದೆ.

ದೇವದುರ್ಗ: ಒಟ್ಟು 13 ಸ್ಥಾನಗಳಿದ್ದು, 7 ಸ್ಥಾನಗಳು ಮಹಿಳೆಯರಿಗೆ ಮೀಸಲು. ಪರಿಶಿಷ್ಟ ಜಾತಿಗೆ 3, ಪರಿಶಿಷ್ಟ ಪಂಗಡಕ್ಕೆ 3 ಹಾಗೂ ಸಾಮಾನ್ಯ ವರ್ಗಕ್ಕೆ 7 ಸ್ಥಾನಗಳನ್ನು ಮೀಸಲಿಡಲಾಗಿದೆ.

ಮೀಸಲಾತಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಸ್ಥಳೀಯ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಚುರುಕುಗೊಳ್ಳುವ ನಿರೀಕ್ಷೆ ಇದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor