ರಾಯಚೂರು | ಕೈಗಾರಿಕಾ ಪ್ರದೇಶಕ್ಕಾಗಿ ರೈತರ ಜಮೀನು ಭೂಸ್ವಾಧೀನ ಆರೋಪ; ಜನಶಕ್ತಿ ಸಂಘಟನೆಯಿಂದ ಪ್ರತಿಭಟನೆ
ರಾಯಚೂರು: ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಬಲವಂತವಾಗಿ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದ್ದು, ಕೂಡಲೇ ಅದನ್ನು ಕೈ ಬಿಡಬೇಕು ಎಂದು ಆರೋಪಿಸಿ ಕರ್ನಾಟಕ ಜನಶಕ್ತಿ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಬಸವನ ಬಾವಿ ವೃತ್ತ, ಗಾಂಧಿ ಚೌಕ್, ಬಸವೇಶ್ವರ ವೃತ್ತ, ಲಿಂಗಸುಗೂರು ರಸ್ತೆಯ ಮಾರ್ಗವಾಗಿ ಯಕ್ಲಾಸಪುರ ಹಾಗೂ ಜಿಲ್ಲಾಧಿಕಾರಿ ಕಚೇರಿವರೆಗೆ ಮರೆವಣಿಗೆ ನಡೆಸಲಾಯಿತು.
ಬಳಿಕ ಹೋರಾಟಗಾರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ರಾಯಚೂರು ತಾಲೂಕಿನ ಕುರುಬದೊಡ್ಡಿ ಗ್ರಾಮದಲ್ಲಿ 147 ಎಕರೆ, ಚಂದ್ರಬಂಡ, ಸಿಂಗನೋಡಿ ಗ್ರಾಮದಲ್ಲಿ 508 ಎಕರೆ ಹಿಡುವಳಿಯ ಒಟ್ಟು 655 ಎಕರೆ ಸ್ವಾಧೀನಕ್ಕೆ ಮುಂದಾಗಿದೆ. ಜಿಲ್ಲಾಧಿಕಾರಿ ಜು.28 ರಂದು ಹಿಡುವಳಿ ರೈತರ ಸಭೆ ಕರೆದಿದ್ದಾರೆ. ಆ ಸಭೆಯಲ್ಲಿ ರೈತರ ಭೂಮಿ ಸ್ವಾಧೀನ ಬಗ್ಗೆ ಕೈ ಬಿಡಬೇಕು ಎಂದು ಆಗ್ರಹಿಸಿದರು.
ನಾವು ಯಾವುದೇ ಒಂದು ಇಂಚು ಕೂಡ ಭೂಮಿ ಬಿಟ್ಟು ಕೊಡಲ್ಲ, ಕೈಗಾರಿಕೆ ಬೇರೆ ಕಡೆ ಮಾಡಬೇಕು ಎಂದು ಎಚ್ಚರಿಕೆ ನೀಡಿದರು
ಪ್ರತಿಭಟನೆಯಲ್ಲಿ ಆಂಜನೇಯ ಕುರುಬದೊಡ್ಡಿ, ಮಾರೆಪ್ಪ ಹರವಿ, ರಂಗಾರೆಡ್ಡಿ, ಹನುಮಂತ ಗುಂಜಳ್ಳಿ , ಬಂಗಾರಿ ನರಸಿಂಹ,ಮಹೇಂದ್ರ ಗಾಜರಹಾಳ, ನರಸಿಂಹ, ಪಿ.ಮಾರೆಪ್ಪ, ನರಸಪ್ಪ ಇದ್ದರು.