ಒಳ ಮೀಸಲಾತಿ ಜಾರಿಗಾಗಿ ಡಿ.17ರಂದು ಬೆಳಗಾವಿ ಚಲೋ ಹೋರಾಟ: ನರಸಪ್ಪ ದಂಡೋರ
ರಾಯಚೂರು: ಮಾದಿಗ ಸಮಾಜಕ್ಕೆ ಒಳ ಮೀಸಲಾತಿ ಪೂರ್ಣ ಪ್ರಮಾಣ ಜಾರಿಗೆ ಆಗ್ರಹಿಸಿ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯಿಂದ ಡಿಸೆಂಬರ್ 17 ರಂದು ಬೆಳಗಾವಿ ಚಲೋ ಹಾಗೂ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಯಲಿದೆ ಎಂದು ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ನರಸಪ್ಪ ದಂಡೋರ ಹೇಳಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಒಳಮೀಸಲು ಜಾರಿಗೆ ಆಸಕ್ತಿ ತೋರುತ್ತಿಲ್ಲ. ಜನರಿಗೆ ನೀಡಿದ ಮಾತು ಉಳಿಸಿಕೊಳ್ಳುವದಾಗಿ ಹೇಳುತ್ತಲೇ ಉದ್ದೇಶ ಪೂರಕವಾಗಿ ವಿಳಂಬ ಧೋರಣೆ ಅನುಸರಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಳ ಮೀಸಲಾತಿ ಜಾರಿ ಗೊಳಿಸುವುದಾಗಿ ಹೇಳಿ ನ್ಯಾಯಮೂರ್ತಿ ನಾಗಮೋಹನದಾಸ ಅವರಿಂದ ಪಡೆದ ವರದಿಯನ್ನು ಜಾರಿಗೊಳಿಸದೆ ಮೀಸಲು ಹಂಚಿಕೆ ಮಾಡಿ ಗೊಂದಲ ಸೃಷ್ಟಿಗೆ ಕಾರಣರಾದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ದುಳ್ಳಯ್ಯ ಗುಂಜಳ್ಳಿ, ರಂಜೀತ ದಂಡೋರ, ಜಕ್ರಪ್ಪ ಹಂಚಿನಾಳ, ಗೋವಿಂದ ಇಟೇಕರ್, ಹನುಮಂತ ಜುಲಮಗೇರ, ಭೀಮೇಶ ತುಂಟಾಪುರು, ದಾವೀದ, ರಾಜಪ್ಪ ಮರ್ಚಟ್ಹಾಳ, ಮಾರುತಿ ಉಪಸ್ಥಿತರಿದ್ದರು.