ಲೋಕಾಯುಕ್ತ ವಿಶೇಷ ಸಾರ್ವಜನಿಕ ಅಭಿಯೋಜಕರಾಗಿ ಮಲ್ಲಿನಾಥ ಎಸ್ ಹಿರೇಮಠ ನೇಮಕ
Update: 2025-12-15 23:22 IST
ರಾಯಚೂರು ಡಿ15: ರಾಯಚೂರು ಜಿಲ್ಲಾ ಲೋಕಾಯುಕ್ತ ವಿಶೇಷ ಸಾರ್ವಜನಿಕ ಅಭಿಯೋಜಕರಾಗಿ ಮಲ್ಲಿನಾಥ ಎಸ್ ಹಿರೇಮಠ ಅವರನ್ನು ನೇಮಿಸಿ ಕರ್ನಾಟಕ ಲೋಕಾಯುಕ್ತ ನಿಬಂಧಕರು ಆದೇಶ ಹೊರಡಿಸಿದ್ದಾರೆ.
ಇಂಧೂದರ ಎಂ ಪಾಟೀಲ್ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಅವರ ಸ್ಥಾನಕ್ಕೆ ರಾಯಚೂರು ಜಿಲ್ಲಾ ವಿಶೇಷ ಸಾರ್ವಜನಿಕ ಅಭಿಯೋಜಕರಾಗಿ ಮಲ್ಲಿನಾಥ ಎಸ್ ಹಿರೇಮಠ ಅವರನ್ನು ತತ್‍ಕ್ಷಣ ದಿಂದ ಬರುವಂತೆ ನೇಮಕ ಮಾಡಲಾಗಿದೆ.