×
Ad

ರಾಯಚೂರು | ಅಭ್ಯರ್ಥಿಗಳ ಪಟ್ಟಿ ಪ್ರಕಟಿಸದೇ ಚುನಾವಣಾಧಿಕಾರಿ ಪರಾರಿ ಆರೋಪ

Update: 2024-11-29 23:45 IST

ರಾಯಚೂರು : ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ, ಖಜಾಂಚಿ, ರಾಜ್ಯ ಪರಿಷತ್ತಿನ ಚುನಾವಣೆಗೆ ಸಂಬಂಧಿಸಿದಂತೆ ಶುಕ್ರವಾರ ಅಂತಿಮ ಕಣದಲ್ಲಿ ಇರುವವರ ಅಭ್ಯರ್ಥಿಗಳನ್ನು ಪ್ರಕಟಿಸದೇ ಚುನಾವಣಾಧಿಕಾರಿಯಾಗಿದ್ದ ಭೀಮಪ್ಪ ನಾಯಕ ಅವರು ಪರಾರಿಯಾಗಿದ್ದಾರೆ ಎಂದು ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಯಾಗಿರುವ ಮಹಾಂತೇಶ ಬಿರಾದಾರ ಆರೋಪಿಸಿದ್ದಾರೆ.

ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜ್ಯ ಪರಿಷತ್ ಮತ್ತು ಖಜಾಂಚಿ ಹುದ್ದೆಗೆ ಒಟ್ಟು ಕ್ರಮವಾಗಿ ಆರು ಜನ ಮತ್ತು ರಾಜ್ಯ ಪರಿಷತ್ ಹಾಗೂ ಖಜಾಂಚಿ ಹುದ್ದೆಗೆ ಮೂರು ಜನ ನಾಮಪತ್ರ ಸಲ್ಲಿಸಿದ್ದರು.

ಶುಕ್ರವಾರ ಭೀಮರಾಜ ಹವಾಲ್ದಾರ್, ಸುರೇಶ ಕುರ್ಡಿ, ರಾಘವೇಂದ್ರ ಎಂಬ ಮೂರು ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ, ಅಂತಿಮ ಕಣದಲ್ಲಿ ಮಹಾಂತೇಶ್ ಬಿರಾದಾರ್ ಕೃಷ್ಣ ಮತ್ತು ಆಂಜನೇಯ ಕಾವಲಿ ಅಭ್ಯರ್ಥಿಗಳಾಗಿ ಅಧ್ಯಕ್ಷ ಹುದ್ದೆಗೆ ಉಳಿದಿದ್ದು, ಉಳಿದ ಹುದ್ದೆಗೆ ಸ್ಪರ್ಧಿಸಿದ ಅಭ್ಯರ್ಥಿಗಳು ಯಥಾವತ್ತಾಗಿ ಮೂರು ಜನ ಕಣದಲ್ಲಿದ್ದಾರೆ. ಆದರೆ, ಕಣ್ಣದಲ್ಲಿರುವವರ ಅಂತಿಮ ಪಟ್ಟಿ ಪ್ರಕಟಿಸದೇ ಚುನಾವಣೆ ಅಧಿಕಾರಿ ಭೀಮಪ್ಪ ನಾಯಕ ಅವರು ಅಭ್ಯರ್ಥಿ ಕೃಷ್ಣ ಅವರ ಪರ ಲಾಬಿ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಚುನಾವಣಾಧಿಕಾರಿಯಾಗಿದ್ದ ಭೀಮಪ್ಪ ನಾಯಕ ಅವರು ಕಣದಲ್ಲಿರುವ ಅಂತಿಮ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೇ ಪರಾರಿಯಾಗಿರುವ ಬಗ್ಗೆಯೂ ಜಿಲ್ಲಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ ಎಂದು ಮಹಾಂತೇಶ ಬಿರಾದಾರ್ ತಿಳಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News