ರಾಯಚೂರು | ಲಾಳಗೊಂಡ ಸಮಾಜದವರು ಲಿಂಗಾಯತ ಧರ್ಮ ಎಂದು ನಮೂದಿಸಲು ಮನವಿ
ರಾಯಚೂರು: ಹಿಂದುಳಿದ ವರ್ಗಗಳ ಜಾತಿ ಗಣತಿಯಲ್ಲಿ ಲಾಳಗೊಂಡ ಸಮಾಜದ ಜನರು ಧರ್ಮ ಕಾಲಂನಲ್ಲಿ ‘ಲಿಂಗಾಯತ’, ಉಪಜಾತಿ ಕಾಲಂನಲ್ಲಿ ‘ಲಾಳಗೊಂಡ’, ಜಾತಿ ಕಾಲಂನಲ್ಲಿ ‘ಲಿಂಗಾಯತ’ ಎಂದು ಬರೆಯಿಸಬೇಕೆಂದು ಅಖಿಲ ಕರ್ನಾಟಕ ಲಿಂಗಾಯತ ಲಾಳಗೊಂಡ ಸಂಘದ ರಾಜ್ಯಾಧ್ಯಕ್ಷ ಹರವಿ ಬಸನಗೌಡ ಮನವಿ ಮಾಡಿದ್ದಾರೆ.
ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅನ್ಯ ಮಾತಿಗೆ ಕಿವಿಗೊಡದೇ ಸಮುದಾಯದ ಜನಸಂಖ್ಯೆಯ ಖಚಿತತೆಗೆ ಎಲ್ಲರೂ ಸಹಕರಿಸಬೇಕು. ಗಣತಿಯಲ್ಲಿ ಉಪಜಾತಿ ಕೋಡ್ – ಎ-0825 ‘ಲಾಳಗೊಂಡ’, ಜಾತಿ ಕೋಡ್ – ಎ-0832 ‘ಲಿಂಗಾಯತ’ ಎಂದು ಕಡ್ಡಾಯವಾಗಿ ನಮೂದಿಸಬೇಕು ಎಂದು ವಿವರಿಸಿದರು.
ಶಾಂತಾಶ್ರಮದ ಶ್ರೀನಿಜಾನಂದ ಸ್ವಾಮೀಜಿ ಮಾತನಾಡಿ, ಹಿಂದುಳಿದ ವರ್ಗಗಳ ಗಣತಿಯಲ್ಲಿ ಲಾಳಗೊಂಡ ಸಮಾಜದ ಜನರು ಧರ್ಮ ಮತ್ತು ಜಾತಿ ಕಾಲಂನಲ್ಲಿ ಗೊಂದಲಕ್ಕೀಡಾಗದೆ ಸಮರ್ಪಕ ಮಾಹಿತಿ ದಾಖಲಿಸಬೇಕು. ಸರ್ಕಾರ ಲಾಳಗೊಂಡ ಸಮಾಜಕ್ಕೆ ಪ್ರತ್ಯೇಕ ಕೋಡ್ (ಎ-0825) ನೀಡಿದೆ, ಅದನ್ನು ಸರಿಯಾಗಿ ಬಳಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಸವರಾಜ ಪಾಟೀಲ್ ಅತ್ತನೂರು, ಆಲ್ದಾಳ ವೀರಭದ್ರಪ್ಪ, ಶಿವಪ್ಪಗೌಡ, ಹರವಿ ನಾಗನಗೌಡ, ಶಶಿಧರ ಗೌಡ, ಶರಣಬಸವ ನೀರಮಾನವಿ, ಮಲ್ಲಿಕಾರ್ಜುನ ಗೌಡ ಪೋತ್ನಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.