ರಾಯಚೂರು: ಬಾಲ ಮಾರಮ್ಮ ಜಾತ್ರೆಗೆ ಚಾಲನೆ

Update: 2026-07-30 14:55 IST

ರಾಯಚೂರು: ನಗರದ ತಿಮ್ಮಾಪುರಪೇಟೆಯ ಬಾಲ ಮಾರಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ಬುಧವಾರ ಚಾಲನೆ ನೀಡಲಾಯಿತು. ಭಕ್ತರು ವಿಶೇಷ ಪೂಜೆ, ಪುನಸ್ಕಾರ ಸಲ್ಲಿಸಿ ದರ್ಶನ ಪಡೆದರು.

ಜಿಲ್ಲೆಯ ಮಾತ್ರವಲ್ಲದೆ ನೆರೆಯ ತೆಲಂಗಾಣ, ಆಂಧ್ರಪ್ರದೇಶದಿಂದ ಭಕ್ತರು ಜಾತ್ರೆಗೆ ಆಗಮಿಸಿದ್ದಾರೆ.

ಕೆಪಿಸಿಸಿ ಹಿಂದುಳಿದ ವರ್ಗದ ಉಪಾಧ್ಯಕ್ಷ ತಲಕಾಯಿ ಮಾರೆಪ್ಪ ಅವರು ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. 

ಬೆಳೆಗಳು ಫಲವತ್ತಾಗಿ ಬರಬೇಕು. ಎಲ್ಲಾ ಕೆರೆಕಟ್ಟೆಗಳು, ಜಲಾಶಯಗಳು ಭರ್ತಿಯಾಗಿ ರಾಜ್ಯದಲ್ಲಿ ಸುಭಿಕ್ಷೆ ಕಾಣಿಸಿಕೊಳ್ಳಬೇಕು. ರಾಜ್ಯದಲ್ಲಿ ಆವರಿಸಿರುವ ಬರಗಾಲವನ್ನು ಆ ಇಲ್ಲವಾಗಿಸಬೇಕು ಎಂದು ರೈತರು ವಿಶೇಷ ಪೂಜೆ ಮತ್ತು ಪ್ರಾರ್ಥನೆ ಮಾಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News