ರಾಯಚೂರು | ಬಾಲಮಂದಿರದ ಬಾಲಕ ಕಾಣೆ: ಪತ್ತೆಗೆ ಪೊಲೀಸರ ಮನವಿ
ರಾಯಚೂರು : ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯ ವ್ಯಾಪ್ತಿಯ ರಾಂಪೂರು ರಸ್ತೆಯ ಎಂ ಎಂ ಕಾಲೋನಿ ನಿವಾಸಿ ಅನಿಲ ಕುಮಾರ (17) ಎಂಬ ಬಾಲಕನು, ಆ.20ರಂದು ಬಿಜಾಪುರ ಬಾಲಕರ ಬಾಲಮಂದಿರದಿಂದ ಶಾಲೆಗೆ ಹೋಗುತ್ತೇನೆಂದು ಹೇಳಿ ಹೋದವನು ಮರಳಿ ಬಾಲಮಂದಿರಕ್ಕೆ ಬಾರದೆ ಕಾಣೆಯಾಗಿದ್ದು, ಠಾಣೆಯಲ್ಲಿ ಗುನ್ನೆ ನಂಬರ್: 90/2025 ಕಲಂನಡಿ ಪ್ರಕರಣ ದಾಖಲಾಗಿದೆ.
ಬಾಲಮಂದಿರದಿಂದ ಸೆ.20ರಂದು ಸಂಜೆ 6 ಗಂಟೆಗೆ ಪೋಷಕರಿಗೆ ಕರೆ ಮಾಡಿ, ಅನಿಲ್ ಇನ್ನೂ ಮರಳಿ ಬಂದಿಲ್ಲವೆಂದು ತಿಳಿಸಲಾಗಿತ್ತು. ಹುಡುಕಾಟದ ವೇಳೆ, ಆ.21ರಂದು ಬೆಳಿಗ್ಗೆ 11 ಗಂಟೆಗೆ ಅನಿಲ್ ತನ್ನ ಅತ್ತೆ ಹುಲಿಗೆಮ್ಮಳ ಮನೆಗೆ ಬಂದು 200 ರೂ. ಪಡೆದು ಬಿಜಾಪುರಕ್ಕೆ ವಾಪಸ್ ಹೋಗುತ್ತೇನೆ ಎಂದು ಹೇಳಿ ಹೊರಟಿದ್ದಾನೆ ಎಂಬ ಮಾಹಿತಿ ಕುಟುಂಬದಿಂದ ಲಭ್ಯವಾಗಿದೆ.
ಚಹರೆ ಪಟ್ಟಿ: 5 ಫೀಟ್ 7 ಇಂಚು ಎತ್ತರ, ಬಿಳಿ ಮೈ ಬಣ್ಣ, ದುಂಡು ಮುಖ, ತೆಳ್ಳನೆಯ ಮೈಕಟ್ಟು, ತಲೆಯಲ್ಲಿ ಕಪ್ಪು ಕೂದಲು ಕಪ್ಪು ಬಣ್ಣದ ಟಿ-ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು, ಕನ್ನಡ, ತೆಲಗು ಹಾಗೂ ಹಿಂದಿ ಭಾಷೆ ಮಾತನಾಡುತ್ತಾನೆ.
ಈ ಬಗ್ಗೆ ಯಾವುದೇ ಮಾಹಿತಿ ಲಭ್ಯವಾದಲ್ಲಿ ಮಾರ್ಕೆಟ್ ಯಾಎಡ್ ಪೊಲೀಸ್ ಠಾಣೆಯ ಪಿ.ಎಸ್.ಐ ಮೊಬೈಲ್ ಸಂಖ್ಯೆ: 9480803849 ಅಥವಾ ಠಾಣೆಯ ದೂರವಾಣಿ ಸಂಖ್ಯೆ: 08532-235600ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.