ರಾಯಚೂರು | ಕಾಲುವೆಗೆ ಜಾರಿದ ಕಾರು : ತಪ್ಪಿದ ಅನಾಹುತ
Update: 2025-07-28 19:13 IST
ರಾಯಚೂರು: ಜಿಲ್ಲೆಯ ಮಸ್ಕಿ ಪಟ್ಟಣದ ಹೊರವಲಯದ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ ಮೈಲ್ 69 ಗೇಟಿನ ಬಳಿ ಇಳಿಜಾರಿನಲ್ಲಿ ತೊಳೆಯಲು ನಿಂತಿದ್ದ ಎರ್‌ಟಿಗ ಕಾರು ಕಾಲುವೆಗೆ ಉರುಳಿ ಬಿದ್ದ ಘಟನೆ ಭಾನುವಾರ ನಡೆದಿದೆ.
ಮಸ್ಕಿ ತಾಲೂಕಿನ ನಾಗರಬೆಂಚಿ ಗ್ರಾಮದ ವ್ಯಕ್ತಿಗೆ ಸೇರಿದ ಎರ್‌ಟಿಗ ಕಾರು ಕಾಲುವೆಯ ದಂಡೆಯ ಮೇಲೆ ನಿಲ್ಲಿಸಲಾಗಿತ್ತು. ಕಾರನ್ನು ನಿಲ್ಲಿಸಿ ಚಾಲಕ ಕಾಲುವೆಯಲ್ಲಿ ಸ್ನಾನ ಮಾಡಲು ತೆರಳಿದ್ದ ವೇಳೆ ಕಾಲುವೆಗೆ ಕಾರು ಉರುಳಿ ಬಿದ್ದಿದೆ. ಗೇರ್, ಹ್ಯಾಂಡ್ ಬ್ರೇಕ್ ಹಾಕದೆ ಹಾಗೇ ನಿಲ್ಲಿಸಿದ್ದರಿಂದ ಕಾಲುವೆಗೆ ಇಳಿದಿದೆ ಎನ್ನಲಾಗಿದೆ.
ಬಳಿಕ ಕ್ರೇನ್ ಮೂಲಕ ಕಾರನ್ನು ಹೊರ ತೆಗೆಯಲಾಗಿದೆ.