ರಾಯಚೂರು | ಹಿರಿಯ ನಾಗರಿಕರ ಯೋಗ ಕ್ಷೇಮ ಕೇಂದ್ರ ಆರಂಭಿಸಲು ಒತ್ತಾಯ
ರಾಯಚೂರು: ಪವನ ಪಾಟೀಲ್ ಎಂಬುವವರು ಹಿರಿಯ ನಾಗರಿಕ ಇಲಾಖೆಯಡಿ ನಿರ್ವಹಿಸುತ್ತಿರುವ ಹಿರಿಯ ನಾಗರಿಕ ಯೋಗಕ್ಷೇಮ ಕೇಂದ್ರವನ್ನು ಸ್ಥಗಿತಗೊಳಿಸುವ ಮೂಲಕ ಹಿರಿಯ ನಾಗರಿಕರು ಸೌಕರ್ಯಗಳಿಂದ ವಂಚಿತಗೊಂಡಿದ್ದು, ಕೂಡಲೇ ಪರ್ಯಾಯ ಸಂಸ್ಥೆಯಿಂದ ಯೋಗ ಕ್ಷೇಮ ಕೇಂದ್ರವನ್ನು ಆರಂಭಿಸಬೇಕು ಎಂದು ಹಿರಿಯ ನಾಗರೀಕರ ಸಂಘದ ಮುಖಂಡ ಸುಧಾಕರ ಅವರು ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಐಡಿಎಸ್‍ಎಂಟಿ ಬಡಾವಣೆಯಲ್ಲಿ ನಿರ್ವಹಣೆ ಮಾಡುತ್ತಿದ್ದ ಹಿರಿಯ ನಾಗರಿಕರ ಯೋಗ ಕ್ಷೇಮ ಕೇಂದ್ರವನ್ನು ಮಾ.31ರಂದು ಬಂದ್ ಮಾಡಲಾಗಿದೆ. ಪವನ ಪಾಟೀಲ್ ಎಂಬುವರಿಗೆ ಕಳೆದ ನಾಲ್ಕು ತಿಂಗಳ ಹಿಂದೆ ಕೇಂದ್ರ ನಡೆಸಲು ಆಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಿಳಿಸಿದ್ದಾರಂತೆ. ಆದರೆ ಪರ್ಯಾಯ ವ್ಯವಸ್ಥೆ ಮಾಡಲು ಹಿರಿಯ ನಾಗರೀಕ ಇಲಾಖೆಯೂ ಮುಂದಾಗಿಲ್ಲ ಎಂದು ಹೇಳಿದರು.
ಐದು ಕೇಂದ್ರಗಳ ನಿರ್ವಹಣೆಯ ಜವಾಬ್ದಾರಿಯನ್ನು ಪವನ್ ಪಾಟೀಲ್ ಅವರಿಗೆ ವಹಿಸಲಾಗಿದೆ. ಹಿರಿಯ ನಾಗರಿಕ ಯೋಗ ಕ್ಷೇಮ ಕೇಂದ್ರ, ಕಾರ್ಮಿಕರ ಹಿರಿಯ ನಾಗರಿಕರ ಡೇ ಕೇರ್ ಕೇಂದ್ರ, ಹಮಾಲಿ ಹಿರಿಯ ನಾಗರಿಕರ ಡೇ ಕೇರ್ ಕೇಂದ್ರ, ಹಿರಿಯರ ವೃದ್ದಾಶ್ರಮ ಕೇಂದ್ರ ಮತ್ತು ಹಿರಿಯ ನಾಗರೀಕರ ಸಹಾಯವಾಣಿ ಕೇಂದ್ರ ನೀಡಲಾಗಿದೆ ಎಂದು ವಿವರಿಸಿದರು.
ಈ ಬಗ್ಗೆ 23ರಂದು ಜಿಲ್ಲೆಗೆ ಆಗಮಿಸುವ ಮುಖ್ಯಮಂತ್ರಿಗಳಿಗೂ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಹೇಳಿದರು.
ನಿವೃತ್ತ ನೌಕರರ ತಿಮ್ಮಾರೆಡ್ಡಿ ಮಾತನಾಡಿದರು.
ಮುಖಂಡರಾದ ಈಶ್ವರಪ್ಪ, ಗಂಗಪ್ಪ, ಸಂಪತ್‍ಕುಮಾರ, ರುದ್ರಯ್ಯ ಗುಣಾರಿ, ಶಂಕರಪ್ಪ, ಹನುಮಂತ ಹಾಗೂ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.