ರಾಯಚೂರು | ನಾಗರಪಂಚಮಿ ಮಾನವ ಬಂಧುತ್ವ ವೇದಿಕೆಯ ನೇತೃತ್ವದಲ್ಲಿ ಮಕ್ಕಳಿಗೆ ಹಾಲು ವಿತರಣೆ
ರಾಯಚೂರು : ಮಾನವ ಬಂಧುತ್ವ ವೇದಿಕೆ ಬೆಂಗಳೂರು, ರವಿ ಪಾಟೀಲ್ ಫೌಂಡೇಶನ್ ರಾಯಚೂರು ಹಾಗೂ ಸ್ಲಂ ಜನಾಂದೋಲನ ಕರ್ನಾಟಕ ಇವರ ಸಯುಕ್ತ ಆಶ್ರಯದಲ್ಲಿ ನಗರದ ಪದ್ಮಾವತಿ ಕಾಲೋನಿ ಸ್ಲಂನಲ್ಲಿ ಹಾಗೂ ಅಂಬೇಡ್ಕರ್ ನಗರ ಸ್ಲಂನಲ್ಲಿ ಬಸವ ಪಂಚಮಿ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ರವಿ ಫೌಂಡೇಶನ್ ಕಾರ್ಯದರ್ಶಿಗಳಾದ ಲಕ್ಷ್ಮಣ ದಾಸರಿಯವರು ಮಕ್ಕಳಿಗೆ ಹಾಲು ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯ ಮುಖಂಡ ಜನಾರ್ದನ್ ಹಳ್ಳಿಬೆಂಚಿ ಮಾತನಾಡಿ, ಇವತ್ತು ದೇಶದೆಲ್ಲೆಡೆ ನಾಗರ ಪಂಚಮಿ ಹಬ್ಬದ ಅಂಗವಾಗಿ ಹುತ್ತಕ್ಕೆ ಹಾಲೆರಿಯುವ ಹಾಗೂ ಕಲ್ಲಿನ ನಾಗರಕ್ಕೆ ಹಾಲು ಸುರಿಯುವ ಮೂಲಕ ಮಕ್ಕಳ ಪೌಷ್ಟಿಕತೆಗೆ ಕಾರಣವಾಗಬೇಕಾದ ಹಾಲನ್ನು ವ್ಯರ್ಥ ಮಾಡುವ ಮೂಲಕ ಮೌಡ್ಯತೆಯನ್ನು ಪಸರಿಸಲಾಗುತ್ತಿದೆ.
ಮೂರು ಜಂಟಿ ಸಂಘಟನೆಗಳ ನೇತೃತ್ವದಲ್ಲಿ ಆಯ್ದ ಕೆಲ ಸ್ಲಂ ಪ್ರದೇಶಗಳಲ್ಲಿ ಈ ರೀತಿಯ ಮೌಢ್ಯತೆಯ ಕುರಿತು ಜಾಗೃತಿ ಮೂಡಿಸುವ ಮೂಲಕ ಮಕ್ಕಳಿಗೆ ಹಾಲು ಕುಡಿಸುವುದರೊಂದಿಗೆ ಬಸವ ಪಂಚಮಿ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಮುಂದಾಗಿವೆ ಎಂದು ತಿಳಿಸಿದರು.
ಕೆ.ಪಿ. ಅನಿಲ್ ಕುಮಾರ್ ಮಾತನಾಡಿದರು.
ಈ ಸಂದರ್ಭದಲ್ಲಿ ಸ್ಲಂ ಜನದೋಲನ ಮುಖಾಂಡರಾದ ಜನಾರ್ಧನ್ ಹಳ್ಳಿಬೆಂಚಿ, ಎಂಆರ್‌ಎಚ್‌ಎಸ್ ಹಿರಿಯ ಮುಖಾಂಡರಾದ ಕುಮಾರ್, ರವಿ ಪಾಟೀಲ್ ಫೌಂಡೇಶನ್ ಕಾರ್ಯದರ್ಶಿಗಾಳದ ಲಕ್ಷಣ ದಾಸರಿ, ಬಸವರಾಜ್ ಹೊಸೂರು, ಪ್ರಸಾದ್, ಜಂಬಣ್ಣ ಪದ್ಮಾವತಿ ಕಾಲೋನಿ, ಜಿ.ರಾಜು ಅಂಬೇಡ್ಕರ್ ನಗರ, ಮಹೇಶ್ ಅಂಬೇಡ್ಕರ್ ನಗರ, ಮಾಧವ್ ರೆಡ್ಡಿ, ಇನ್ನತರು ಉಪಸ್ಥಿತರಿದ್ದರು.