×
Ad

ರಾಯಚೂರು | ದಸರಾ ಹಬ್ಬದ ಪೂರ್ವಭಾವಿ ಸಿದ್ದತಾ ಸಭೆ

Update: 2025-09-24 15:11 IST

ರಾಯಚೂರು : ನಗರದ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಸೆ.24ರಂದು ದಸರಾ ಹಬ್ಬದ ಪೂರ್ವಭಾವಿ ಸಿದ್ದತಾ ಸಭೆಯು ಮಹಾನಗರ ಪಾಲಿಕೆಯ ಮಹಾಪೌರ ನರಸಮ್ಮ ನರಸಿಂಹಲು ಮಾಡಿಗಿರಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಸಭೆಯಲ್ಲಿ ಹಬ್ಬದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಯಿತು. ಪಾಲಿಕೆಯ ಹಿರಿಯ ಸದಸ್ಯರು ಜಯಣ್ಣ ಹಾಗೂ ಈ. ಶಶಿರಾಜ ಮಾತನಾಡಿ, ಸ್ಥಳೀಯ, ಜಿಲ್ಲಾ, ರಾಜ್ಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಆಕರ್ಷಕ ಕಲಾ ತಂಡಗಳನ್ನು ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಬೇಕು ಎಂದು ಸಲಹೆ ನೀಡಿದರು.

ಮೆಕ್ಕಾ ದರವಾಜದಲ್ಲಿ ಕವಿಗೋಷ್ಠಿ ಆಯೋಜಿಸಿ, ಹೆಸರಾಂತ ಕವಿ-ಸಾಹಿತ್ಯಿಕರನ್ನು ಕರೆಯಿಸಿ ವಿಜೃಂಭಣೆಯಿಂದ ನಡೆಸಲು ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಉಪ ಮಹಾಪೌರ ಸಾಜೀದ್ ಸಮೀರ್‌, ಸದಸ್ಯರಾದ ದರೂರು ಬಸವರಾಜ ಪಾಟೀಲ, ಈ. ಶಶಿರಾಜ, ವಿ.ನಾಗರಾಜ, ನಾಮ ನಿರ್ದೇಶಿತ ಸದಸ್ಯರಾದ ಮುನಿಯಪ್ಪ,ಮುಹಮ್ಮದ್‌ ಫಿರೋಝ್‌, ವೆಂಕಟೇಶ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ನರಸಿಂಹಲು ಮಾಡಿಗಿರಿ, ಮಹಾನಗರ ಪಾಲಿಕೆಯ ಆಡಳಿತ ಉಪ ಆಯುಕ್ತ ಸಂತೋಷ ರಾಣಿ, ವಲಯ ಆಯುಕ್ತರು ಬಸವರಾಜ ಹೆಬ್ಬಾಳ, ಮಲ್ಲಿಕಾರ್ಜುನ ಎಂ.ಬಿ., ಜಯಪಾಲ ರೆಡ್ಡಿ, ಸಮುದಾಯ ಸಂಘಟನಾಧಿಕಾರಿ ಕೃಷ್ಣ ಕಟ್ಟಿಮನಿ, ಕಂದಾಯ ಅಧಿಕಾರಿಗಳಾದ ನರಸಿಂಹರೆಡ್ಡಿ, ಕಲಾವಿದ ವಿ.ಎಚ್. ಮಾಸ್ಟರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News