Raichur | ಅ.5ರಂದು ‘ಪ್ರಾಜೆಕ್ಟ್ ಪಂಚತಂತ್ರ’ ನಾಟಕ ಪ್ರದರ್ಶನ : ಲಕ್ಷ್ಮಣ ಮಂಡಲಗೇರಾ
ರಾಯಚೂರು: ರಂಗ ಕನಸು ರಂಗ ಕೇಂದ್ರ (ರಿ.) ಮಂಡಲಗೇರಾ ಆಯೋಜಿಸುವ ಹಾಗೂ ನಿರ್ದಿಗಂತ ಪ್ರಸ್ತುತಪಡಿಸುವ ‘ಪ್ರಾಜೆಕ್ಟ್ ಪಂಚತಂತ್ರ’ ಎಂಬ ವಿಭಿನ್ನ ನಾಟಕ ಅ. 5ರಂದು ಸೋಮವಾರ ಸಂಜೆ 6 ಗಂಟೆಗೆ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ರಂಗ ಕನಸು ಸಂಸ್ಥೆಯ ಕಾರ್ಯದರ್ಶಿ ಹಾಗೂ ರಂಗ ಸಂಘಟಕ ಲಕ್ಷ್ಮಣ ಮಂಡಲಗೇರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಪ್ರಾಜೆಕ್ಟ್ ಪಂಚತಂತ್ರ’ ನಾಟಕವು ಪಂಚತಂತ್ರದ ಪುರಾತನ ಕಥೆಗಳು ಇಂದಿನ ಬದುಕಿನೊಂದಿಗೆ ಸಂವಾದ ನಡೆಸುವ ವಿಭಿನ್ನ ರಂಗ ಪ್ರಯೋಗವಾಗಿದೆ. ಇದು ಕೇವಲ ನಾಟಕವಲ್ಲ, ಒಂದು ಪ್ರಕ್ರಿಯೆಯಾಗಿದ್ದು, ನಟರು ತಮ್ಮ ಕಸುಬನ್ನು ಮೆರೆಸುವುದರ ಜೊತೆಗೆ ಸೃಷ್ಟಿಯ ಪಯಣವನ್ನು ಪ್ರೇಕ್ಷಕರ ಮುಂದೆಯೇ ಬಿಚ್ಚಿಡುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮೂಲ ಪಂಚತಂತ್ರದ ಕಥೆಗಳನ್ನು ಸಮಕಾಲೀನಗೊಳಿಸಿ ಪ್ರಖ್ಯಾತ ಮಲಯಾಳಿ ರಂಗ ನಿರ್ದೇಶಕ ಅರುಣ್ ಲಾಲ್ ಅವರು ರಂಗಪಠ್ಯ ರಚಿಸಿ ನಿರ್ದೇಶಿಸಿದ್ದಾರೆ. ಸಂಗೀತ ನಿರ್ದೇಶನವನ್ನು ಅನುಷ್ ಶೆಟ್ಟಿ ಅವರು ಮಾಡಿದ್ದಾರೆ. ನಾಟಕವು ಹೊಸದಾದ ಹಾಗೂ ವಿಭಿನ್ನ ಲೋಕದ ಅನುಭವವನ್ನು ನೀಡಲಿದೆ ಎಂದು ಅವರು ತಿಳಿಸಿದ್ದಾರೆ.
ಇಂತಹ ಅಪರೂಪದ ರಂಗ ಪ್ರಯೋಗವೊಂದು ರಾಯಚೂರು ನಗರದಲ್ಲಿ ಪ್ರದರ್ಶನಗೊಳ್ಳುತ್ತಿರುವುದು ವಿಶೇಷವಾಗಿದ್ದು, ರಂಗಾಸಕ್ತರು ಬಿಡುವು ಮಾಡಿಕೊಂಡು ರಂಗಮಂದಿರಕ್ಕೆ ಆಗಮಿಸಿ ನಾಟಕವನ್ನು ವೀಕ್ಷಿಸಬೇಕು ಎಂದು ಮನವಿ ಮಾಡಿದ್ದಾರೆ.
ಇತ್ತೀಚೆಗೆ ಅಗಲಿದ ತಮ್ಮ ರಂಗಗುರು ಹಾಗೂ ರಂಗ ನಿರ್ದೇಶಕ ಚಿದಂಬರರಾವ ಜಂಬೆ ಅವರಿಗೆ ಈ ನಾಟಕ ಪ್ರಯೋಗವನ್ನು ಸಮರ್ಪಿಸಲಾಗುತ್ತಿದೆ. ನಾಟಕಕ್ಕೆ ಉಚಿತ ಪ್ರವೇಶವಿದ್ದು, ರಾಯಚೂರಿನ ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರದರ್ಶನವನ್ನು ವೀಕ್ಷಿಸಬೇಕು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ. ಅ.5ರಂದು ರಾಯಚೂರಿನಲ್ಲಿ ‘ಪ್ರಾಜೆಕ್ಟ್ ಪಂಚತಂತ್ರ’ ನಾಟಕ ಪ್ರದರ್ಶನ
ರಾಯಚೂರು: ರಂಗ ಕನಸು ರಂಗ ಕೇಂದ್ರ (ರಿ.) ಮಂಡಲಗೇರಾ ಆಯೋಜಿಸುವ ಹಾಗೂ ನಿರ್ದಿಗಂತ ಪ್ರಸ್ತುತಪಡಿಸುವ ‘ಪ್ರಾಜೆಕ್ಟ್ ಪಂಚತಂತ್ರ’ ಎಂಬ ವಿಭಿನ್ನ ನಾಟಕ ಅ. 5ರಂದು ಸೋಮವಾರ ಸಂಜೆ 6 ಗಂಟೆಗೆ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ರಂಗ ಕನಸು ಸಂಸ್ಥೆಯ ಕಾರ್ಯದರ್ಶಿ ಹಾಗೂ ರಂಗ ಸಂಘಟಕ ಲಕ್ಷ್ಮಣ ಮಂಡಲಗೇರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಪ್ರಾಜೆಕ್ಟ್ ಪಂಚತಂತ್ರ’ ನಾಟಕವು ಪಂಚತಂತ್ರದ ಪುರಾತನ ಕಥೆಗಳು ಇಂದಿನ ಬದುಕಿನೊಂದಿಗೆ ಸಂವಾದ ನಡೆಸುವ ವಿಭಿನ್ನ ರಂಗ ಪ್ರಯೋಗವಾಗಿದೆ. ಇದು ಕೇವಲ ನಾಟಕವಲ್ಲ, ಒಂದು ಪ್ರಕ್ರಿಯೆಯಾಗಿದ್ದು, ನಟರು ತಮ್ಮ ಕಸುಬನ್ನು ಮೆರೆಸುವುದರ ಜೊತೆಗೆ ಸೃಷ್ಟಿಯ ಪಯಣವನ್ನು ಪ್ರೇಕ್ಷಕರ ಮುಂದೆಯೇ ಬಿಚ್ಚಿಡುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮೂಲ ಪಂಚತಂತ್ರದ ಕಥೆಗಳನ್ನು ಸಮಕಾಲೀನಗೊಳಿಸಿ ಪ್ರಖ್ಯಾತ ಮಲಯಾಳಿ ರಂಗ ನಿರ್ದೇಶಕ ಅರುಣ್ ಲಾಲ್ ಅವರು ರಂಗಪಠ್ಯ ರಚಿಸಿ ನಿರ್ದೇಶಿಸಿದ್ದಾರೆ. ಸಂಗೀತ ನಿರ್ದೇಶನವನ್ನು ಅನುಷ್ ಶೆಟ್ಟಿ ಅವರು ಮಾಡಿದ್ದಾರೆ. ನಾಟಕವು ಹೊಸದಾದ ಹಾಗೂ ವಿಭಿನ್ನ ಲೋಕದ ಅನುಭವವನ್ನು ನೀಡಲಿದೆ ಎಂದು ಅವರು ತಿಳಿಸಿದ್ದಾರೆ.
ಇಂತಹ ಅಪರೂಪದ ರಂಗ ಪ್ರಯೋಗವೊಂದು ರಾಯಚೂರು ನಗರದಲ್ಲಿ ಪ್ರದರ್ಶನಗೊಳ್ಳುತ್ತಿರುವುದು ವಿಶೇಷವಾಗಿದ್ದು, ರಂಗಾಸಕ್ತರು ಬಿಡುವು ಮಾಡಿಕೊಂಡು ರಂಗಮಂದಿರಕ್ಕೆ ಆಗಮಿಸಿ ನಾಟಕವನ್ನು ವೀಕ್ಷಿಸಬೇಕು ಎಂದು ಮನವಿ ಮಾಡಿದ್ದಾರೆ.
ಇತ್ತೀಚೆಗೆ ಅಗಲಿದ ತಮ್ಮ ರಂಗಗುರು ಹಾಗೂ ರಂಗ ನಿರ್ದೇಶಕ ಚಿದಂಬರರಾವ ಜಂಬೆ ಅವರಿಗೆ ಈ ನಾಟಕ ಪ್ರಯೋಗವನ್ನು ಸಮರ್ಪಿಸಲಾಗುತ್ತಿದೆ. ನಾಟಕಕ್ಕೆ ಉಚಿತ ಪ್ರವೇಶವಿದ್ದು, ರಾಯಚೂರಿನ ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರದರ್ಶನವನ್ನು ವೀಕ್ಷಿಸಬೇಕು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.