×
Ad

Raichur | ಅಂಚೆ ಇಲಾಖೆಯಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಗೆ ಉತ್ತೇಜನ

Update: 2026-05-16 18:00 IST

Photo credit : PTI

ರಾಯಚೂರು: ಸಾರ್ವಜನಿಕರ ಸೌಲಭ್ಯ ಹಾಗೂ ವೇಗವಾದ ಸೇವೆಯನ್ನು ಗಮನದಲ್ಲಿಟ್ಟುಕೊಂಡು ಅಂಚೆ ಇಲಾಖೆ ವತಿಯಿಂದ ಅಂಚೆ ಕಚೇರಿಗಳಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಉತ್ತೇಜಿಸಲಾಗುತ್ತಿದೆ ಎಂದು ಅಂಚೆ ಇಲಾಖೆಯ ರಾಯಚೂರು ವಿಭಾಗದ ಅಧೀಕ್ಷಕರು ತಿಳಿಸಿದ್ದಾರೆ.

ಅಂಚೆ ಸೇವೆಗಳಾದ ಮನಿ ಆರ್ಡರ್, ಸ್ಪೀಡ್ ಪೋಸ್ಟ್, ಪಾರ್ಸೆಲ್ ಬುಕಿಂಗ್, ಅಂಚೆ ಜೀವ ವಿಮೆ ಪ್ರೀಮಿಯಂ ಪಾವತಿ ಸೇರಿದಂತೆ ಇತರೆ ಸೇವೆಗಳಿಗಾಗಿ ಸಾರ್ವಜನಿಕರು ಯುಪಿಐ, ಕ್ಯೂಆರ್ ಕೋಡ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಮೂಲಕ ಡಿಜಿಟಲ್ ಪಾವತಿಯನ್ನು ಬಳಸುವಂತೆ ಕೋರಲಾಗಿದೆ.

ಡಿಜಿಟಲ್ ಪಾವತಿಯಿಂದ ನಗದು ವ್ಯವಹಾರಗಳ ಅವಶ್ಯಕತೆ ಕಡಿಮೆಯಾಗುವುದರೊಂದಿಗೆ ವ್ಯವಹಾರಗಳು ಸುರಕ್ಷಿತ, ಸುಲಭ ಹಾಗೂ ಪಾರದರ್ಶಕವಾಗುತ್ತವೆ. ಜೊತೆಗೆ ಸಾರ್ವಜನಿಕರಿಗೆ ಸಮಯ ಉಳಿತಾಯವಾಗುವುದರೊಂದಿಗೆ ತ್ವರಿತ ಸೇವೆ ದೊರೆಯಲಿದೆ ಎಂದು ತಿಳಿಸಿದ್ದಾರೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಡಿಜಿಟಲ್ ಪಾವತಿ ವಿಧಾನಗಳನ್ನು ಬಳಸಿಕೊಂಡು ಅಂಚೆ ಇಲಾಖೆಯ ಡಿಜಿಟಲ್ ಸೇವೆಗಳಿಗೆ ಸಹಕರಿಸುವಂತೆ ಅಂಚೆ ಇಲಾಖೆಯ ರಾಯಚೂರು ವಿಭಾಗದ ಅಧೀಕ್ಷಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News