×
Ad

ಬಾನು ಮುಷ್ತಾಕ್‌ಗೆ ವಿರೋಧದ ಹಿಂದೆ ದೊಡ್ಡ ಪಿತೂರಿ ಇದೆ: ಕುಂ.ವೀರಭದ್ರಪ್ಪ

Update: 2025-09-14 21:10 IST

ರಾಯಚೂರು, ಸೆ.14: ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ವಿರೋಧಿಸುತ್ತಿರುವ ಹಿಂದೆ ಬಹುದೊಡ್ಡ ಪಿತೂರಿ ಇದೆ ಎಂದು ಹಿರಿಯ ಸಾಹಿತಿ, ನಾಡೋಜ ಕುಂ.ವೀರಭದ್ರಪ್ಪ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾನು ಮುಷ್ತಾಕ್ ಕನ್ನಡದ ಬಹುದೊಡ್ಡ ಬರಹಗಾರ್ತಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಮನ್ನಣೆಗೆ ಕೆಲಸ ಮಾಡಿದ್ದಾರೆ. ಮುಸ್ಲಿಮ್ ಎಂಬ ಕಾರಣಕ್ಕೆ ಇವರನ್ನು ದಸರಾ ಉದ್ಘಾಟನೆಗೆ ವಿರೋಧಿಸುವವರ ಹಿಂದೆ ಹಾಗೂ ಕಾಂಗ್ರೆಸ್ ಸರಕಾರದ ಪತನ ಮಾಡಲು, ಜನಪ್ರಿಯತೆ ಕುಗ್ಗಿಸುವ ಹುನ್ನಾರ ಅಡಗಿದೆ ಎಂದು ಗಂಭೀರ ಆರೋಪ ಮಾಡಿದರು.

ಈ ಹಿಂದೆ ಸಾಹಿತಿ ನಿಸಾರ್ ಅಹ್ಮದ್ ಸೇರಿದಂತೆ ಅನೇಕರು ದಸರಾ ಉದ್ಘಾಟನೆಯನ್ನು ಮಾಡಿಲ್ಲವೇ. ಅಂದು ವಿರೋಧ ಮಾಡಿಲ್ಲ ಇಂದು ಏಕೆ? ಎಂದು ಪ್ರಶ್ನಿಸಿದ ಅವರು, ರಾಜ್ಯ ಬಿಜೆಪಿ ನಾಯಕರು ಆರೆಸ್ಸೆಸ್ ನಾಯಕರು ಹೇಳಿದಂತೆ ಕುಣಿಯುವ ಕೀಲು ಗೊಂಬೆಗಳಾಗಿದ್ದಾರೆ ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News