Raichur | ಗೆಳೆಯನಿಂದಲೇ ಯುವಕನ ಕೊಲೆ
ಸಾಂದರ್ಭಿಕ ಚಿತ್ರ (AI)
ಮಾನವಿ: ಮಾನವಿ ಪಟ್ಟಣದ ಬಸ್ ನಿಲ್ದಾಣದ ಹಿಂದುಗಡೆ ಇರುವ ಇಂದಿರಾ ನಗರದಲ್ಲಿ ಗುರುವಾರ ರಾತ್ರಿ ಯುವಕನೋರ್ವನನ್ನು ಭೀಕರವಾಗಿ ಹತ್ಯೆಗೈದ ಘಟನೆ ನಡೆದಿದೆ.
ವಸೀಂ (30) ಮೃತಪಟ್ಟ ಯುವಕ. ವಸೀಂ ಸ್ನೇಹಿತ ಝುಬೇರ್ (30) ಹತ್ಯೆಗೈದ ಆರೋಪಿ ಎಂದು ತಿಳಿದು ಬಂದಿದೆ.
ಆರೋಪಿ ಝುಬೇರ್ ಮಾನವಿ ಪೊಲೀಸ್ ಠಾಣೆಗೆ ನೇರವಾಗಿ ಬಂದು ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.