ಸಿಂಧನೂರು | ತುರ್ವಿಹಾಳ ಪಟ್ಟಣಕ್ಕೆ ವಿಜ್ಞಾನ ಸಂಯೋಜನೆ ಮಂಜೂರು
ಸಿಂಧನೂರು : ತಾಲೂಕಿನ ತುರ್ವಿಹಾಳ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿಗೆ 2025-26ನೇ ಸಾಲಿಗೆ ವಿಜ್ಞಾನ ವಿಭಾಗ ಮಂಜೂರು ಮಾಡಿ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ)ಯ ನಿರ್ದೇಶಕಿ ಸಿಂಧು ಬಿ.ರೂಪೇಶ ಆದೇಶಿಸಿದ್ದಾರೆ.
ತುರ್ವಿಹಾಳ ಪಟ್ಟಣದಲ್ಲಿ ಇಲ್ಲಿಯವರೆಗೆ ಕಲಾ ಹಾಗೂ ವಾಣಿಜ್ಯ ವಿಭಾಗಗಳ ಸಂಯೋಜನೆ ಅನುಮತಿಯಿತ್ತು. ಆದರೆ ಇಲ್ಲಿಯವರೆಗೆ ವಿಜ್ಞಾನ ವಿಭಾಗದ ಇರಲಿಲ್ಲ. ಜೊತೆಗೆ ಪಟ್ಟಣದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ವಿಭಾಗದ ಹಲವು ಸಂಯೋಜನೆಗಳಿವೆ.
ಪಿಯುಸಿ ವಿಜ್ಞಾನ ವಿಭಾಗಕ್ಕಾಗಿ ವಿದ್ಯಾರ್ಥಿಗಳು ಸಿಂಧನೂರು ನಗರ ಸೇರಿದಂತೆ ಬೇರೆ ಬೇರೆ ನಗರಗಳಿಗೆ ತೆರಳಿ ಅಭ್ಯಾಸ ಮಾಡಬೇಕಿತ್ತು. ಪಟ್ಟಣಕ್ಕೆ ವಿಜ್ಞಾನ ವಿಭಾಗಬೇಕು ಎನ್ನುವ ಬೇಡಿಕೆ ದಶಕಗಳಿಂದಲೂ ಕೇಳಿಬರುತ್ತಿತ್ತು. ಈ ಬಗ್ಗೆ ಮುತುವರ್ಜಿ ವಹಿಸಿದ ಶಾಸಕ ಆರ್.ಬಸನಗೌಡ ತುರ್ವಿಹಾಳ ಅವರು ಪಟ್ಟಣಕ್ಕೆ ಪದವಿ ಪೂರ್ವ ವಿಭಾಗದ ವಿಜ್ಞಾನ ಕಾಲೇಜು ಮಂಜೂರು ಮಾಡಲು ಉಪನಿರ್ದೇಶಕರ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಯಿತು.