×
Ad

ಝೋನ್ ತಂಡಕ್ಕೆ ರಾಯಚೂರು ಜಿಲ್ಲೆಯ ಮೂವರು ಆಯ್ಕೆ

Update: 2025-09-14 21:49 IST

ರಾಯಚೂರು, ಸೆ.14: ಅಂಡರ್ 19 ವಲಯ ಮಟ್ಟಕ್ಕೆ ಲಿಂಗಸುಗೂರು ತಾಲೂಕಿನ ಕ್ರಿಕೆಟ್ ಆಟಗಾರರಾದ ಸಂಜೀತ್.ವಿ, ಗುರುರಾಜ ಆನ್ವರಿ ಮತ್ತು ಮುಹೀಬ್ ಹಟ್ಟಿ ಅವರು ಜಿಲ್ಲಾ ಮಟ್ಟದ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ರಾಯಚೂರು ಝೋನ್ ತಂಡಕ್ಕೆ ಆಯ್ಕೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಮುಹೀಬ್ ತಜ್ಞ ಬ್ಯಾಟರ್‌ ಆಗಿ ಸ್ಥಾನ ಪಡೆದಿದ್ದರೆ, ಗುರುರಾಜ ಬೌಲರ್ ಆಗಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ತೋರುವ ಎಡಗೈ ಆಟಗಾರ ಸಂಜೀತ್ ಎಡಗೈ ಆಫ್ ಸ್ಪಿನ್ನರ್ ಆಗಿ ಸ್ಥಾನ ಪಡೆದಿದ್ದಾರೆ. ರಾಯಚೂರು ಜೋನ್‌ನಲ್ಲಿ ಏಳು ಜಿಲ್ಲೆಗಳು ಒಳಗೊಂಡಿದ್ದು, ಪ್ರತಿಭಾವಂತರು ಮಾತ್ರ ಸ್ಥಾನ ಪಡೆಯಬಹುದು. ಆಯ್ಕೆಯನ್ನು ಸ್ವಾಗತಿಸುತ್ತ ಲಿಂಗಸುಗೂರು ಲೆದರ್ ಬಾಲ್ ಕ್ರಿಕೆಟ್ ಅಕಾಡಮಿ ಕೋಚ್ ಅಹ್ಮದ್ ಮತ್ತು ಅಜೀರ್ ಆಯ್ಕೆಯಾದ ಆಟಗಾರರಿಗೆ ಶುಭ ಹಾರೈಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News