×
Ad

ಎಚ್‌ಡಿಕೆ, ನಿಖಿಲ್ ಎಂದಿಗೂ ಚನ್ನಪಟ್ಟಣದ ಜನರ ಕಷ್ಟ ಕೇಳಲು ಬಂದಿಲ್ಲ : ಡಿ.ಕೆ.ಸುರೇಶ್

Update: 2024-11-07 15:03 IST

PC :x/@DKSureshINC

ರಾಮನಗರ: "ಚನ್ನಪಟ್ಟಣದ ಜನ ಬಹಳ ಉತ್ಸಾಹದಿಂದ ಯೋಗೇಶ್ವರ್ ಗೆ ಬೆಂಬಲ ನೀಡುತ್ತಿದ್ದಾರೆ" ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದರು.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಪರ ಗುರುವಾರ ಡಿ.ಕೆ.ಸುರೇಶ್ ಪ್ರಚಾರ ನಡೆಸಿದರು.

ಈ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಅವರು, "ಕುಮಾರಸ್ವಾಮಿ ಅವರ ಕಾಲದಲ್ಲಿ ಅಭಿವೃದ್ಧಿ ಕುಂಠಿತ, ಜನಗಳಿಗೆ ಸ್ಪಂದಿಸದೆ ಇರುವುದನ್ನು ಗಮನದಲ್ಲಿಟ್ಟುಕೊಂಡು ಚನ್ನಪಟ್ಟಣ ಕ್ಷೇತ್ರದ ಜನ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರಿಗೆ ಬಹಳ ಉತ್ಸಾಹದಿಂದ ಬೆಂಬಲ ನೀಡುತ್ತಿದ್ದಾರೆ" ಎಂದು ತಿಳಿಸಿದರು.

"ಯೋಗೇಶ್ವರ್ ಅವರು ಕೆರೆಗಳಿಗೆ ನೀರು ತುಂಬಿಸಿ ಅವರ ಬದುಕು ಬದಲಾವಣೆ ಮಾಡುವ ಪ್ರಯತ್ನ ಮಾಡಿದ್ದ ಕಾರಣಕ್ಕೆ ಅವರಿಗೆ ಮತ್ತೊಂದು ಅವಕಾಶ ನೀಡಲು ಮುಂದಾಗಿದ್ದಾರೆ" ಎಂದರು.

ಸರಕಾರದ ಹಗರಣಗಳ ವಿರುದ್ಧ ಹೋರಾಟ ಎಂದು ವಿರೋಧ ಪಕ್ಷಗಳ ಆರೋಪದ ಬಗ್ಗೆ ಕೇಳಿದಾಗ, "ಕುಮಾರಸ್ವಾಮಿ ಹಾಗೂ ಬಿಜೆಪಿ ಅವರ ಕಾಲದಲ್ಲಿ ಆಗಿರುವ ಹಗರಣಗಳನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಸರಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ದೇವೇಗೌಡರು, ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಅವರು ಕಳೆದ 7 ವರ್ಷಗಲ್ಲಿ ಎಂದಿಗೂ ಈ ಕ್ಷೇತ್ರದ ಜನರ ಕಷ್ಟ ಕೇಳಲು ಬಂದಿಲ್ಲ. ಈಗ ಮಗ ಹಾಗೂ ಮೊಮ್ಮಗನ ಗೆಲ್ಲಿಸಲು ಬಂದಿದ್ದಾರೆ. ಇಷ್ಟು ದಿನ ಜನರ ಕಷ್ಟ ಕೇಳಲು ಅವರು ಹಳ್ಳಿಗೆ ಹೋಗಿಲ್ಲ. ಅವರು ಎಂದಾದರೂ ಜನರ ಕಷ್ಟ ಕೇಳಲು ಹೋಗಿದ್ದರೆ, ಮಾಧ್ಯಮಗಳು ಅದರ ಬಗ್ಗೆ ಮಾಹಿತಿ ನೀಡಲಿ" ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News