×
Ad

ಕನಕಪುರ | ಮಗು ಹಠ ಮಾಡುತ್ತೆಂದು ಕೈಗೆ ಬರೆ, ಡೈಪರ್​ಗೆ ಖಾರದಪುಡಿ ಹಾಕಿ ವಿಕೃತಿ: ದೂರು ದಾಖಲು

Update: 2025-03-21 17:30 IST

ರಾಮನಗರ: ಅಂಗನವಾಡಿ ಸಹಾಯಕಿಯೊಬ್ಬರು ಮಗುವಿನ ಕೈಗೆ ಬರೆ ಎಳೆದು, ಡೈಪರ್‌ಗೆ ಖಾರದ ಪುಡಿ ಹಾಕಿ ವಿಕೃತಿ ಮೆರೆದಿರುವ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮಹರಾಜರಕಟ್ಟೆ ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಮಹರಾಜಕಟ್ಟೆ ಗ್ರಾಮದ ರಮೇಶ್ ಹಾಗೂ ಚೈತ್ರಾ ಎಂಬುವವರ ಮಗು ದೀಕ್ಷಿತ್​​ ಮೇಲೆ ಅಂಗನವಾಡಿ ಸಹಾಯಕಿ ಈ ವಿಕೃತಿ ಮೆರೆದಿದ್ದಾಳೆ.

ಘಟನೆ ಸಂಬಂಧ ಅಂಗನವಾಡಿ ಸಹಾಯಕಿ ಚಂದ್ರಮ್ಮ ಎಂಬವರ ಮೇಲೆ ಮಗುವಿನ ಪೋಷಕರು ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಬೆನ್ನಲ್ಲೇ ಚಂದ್ರಮ್ಮನನ್ನು ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಅಂಗನವಾಡಿಯಲ್ಲಿ ಹಠ ಮಾಡುತ್ತಿದ್ದನೆಂದು ಚಂದ್ರಮ್ಮ ಎರಡು ವರ್ಷದ ಮಗುವಿನ ಕೈಗೆ ಬರೆ ಕೊಟ್ಟಿದ್ದು, ಬಳಿಕ ಮಗು ಡೈಪರ್ ಒಳಗೆ ಖಾರದಪುಡಿ ಹಾಕಿದ್ದಾರೆ ಎನ್ನಲಾಗಿದೆ. ಅಂಗನವಾಡಿಯಿಂದ ಮಗು ಕರೆತರಲು ಹೋದಾಗ ಪೋಷಕರು ಇದನ್ನು ಗಮನಿಸಿದ್ದಾರೆ. ಬಳಿಕ ದೂರು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News