ಕಂಟೇನರ್ ನಲ್ಲಿ ವಾಸ್ತವ್ಯ; ಏಷ್ಯನ್ ಗೇಮ್ಸ್ಗಾಗಿ ಭಾರತೀಯ ಕ್ರೀಡಾಪಟುಗಳ ವಿನೂತನ ಸಿದ್ಧತೆ !
Photo Credit : PTI
ಆರು ಅಡಿ ಉದ್ದ ಹಾಸಿಗೆ, ಗೋಡೆಗಳು ಅಕ್ಕಪಕ್ಕದಲ್ಲಿವೆ. ಅಗತ್ಯ ವಸ್ತುಗಳಿಗೆ ಮೀರಿ ಸ್ಥಳವಿಲ್ಲ. ಹೀಗೆ ಭಾರತದ ಕ್ರೀಡಾಪಟುಗಳು ಪಟಿಯಾಲದ ನೇತಾಜಿ ಸುಭಾಷ್ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿರುವ ಶಿಪ್ಪಿಂಗ್ ಕಂಟೇನರ್ ಒಳಗೆ ರಾತ್ರಿ ಕಳೆದು ಅನುಭವ ಪಡೆದುಕೊಳ್ಳುತ್ತಿದ್ದಾರೆ. ಈ ಜೀವನ ಅಹಿತಕರವಾಗಿರುವ ಬದಲಾಗಿ ಏಷ್ಯನ್ ಕ್ರೀಡಾಕೂಟದಲ್ಲಿ ಜಪಾನ್ನಲ್ಲಿ ಅವರಿಗೆ ಕಾಯುತ್ತಿರುವ ಅಸಹಜವಾದ ಜೀವನ ಸ್ಥಿತಿಗೆ ಸಿದ್ಧತೆಯಾಗಿದೆ.
ಜಪಾನ್ನ ಐಚಿ-ನಗೋಯಾ ಕ್ರೀಡಾಕೂಟವು ಸೆಪ್ಟೆಂಬರ್ 19ರಿಂದ ಪ್ರಾರಂಭವಾಗಲಿದೆ. ಈ ಬಾರಿ ಕ್ರೀಡಾಕೂಟದಲ್ಲಿ ಕ್ರೀಡಾಳುಗಳಿಗೆ ಉಳಿದುಕೊಳ್ಳಲು ಕ್ರೀಡಾಗ್ರಾಮದ ಬದಲಿಗೆ ತಾತ್ಕಾಲಿಕ ಕಂಟೇನರ್ ಕೊಠಡಿಗಳನ್ನು ನಿರ್ಮಿಸಲಾಗಿದೆ. ಹೀಗಾಗಿ ಜಪಾನ್ನಲ್ಲಿ ಏನು ನಿರೀಕ್ಷಿಸಬಹುದು ಎನ್ನುವುದಕ್ಕೆ ಪರಿಚಯವಿಲ್ಲದವರಿಗೆ ಪರಿಚಿತರನ್ನಾಗಿಸಲು ಪಟಿಯಾಲ ಮತ್ತು ಬೆಂಗಳೂರಿನಲ್ಲಿರುವ ತನ್ನ ಕೇಂದ್ರಗಳಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ ಕಂಟೇನರ್ ಜೀವನದ ಅನುಭವ ನೀಡುತ್ತಿದೆ.
ಕ್ರೀಡಾಪಟುಗಳು ಸರದಿಯಲ್ಲಿ ಕಂಟೇನರ್ ಒಳಗೆ ರಾತ್ರಿ ಕಳೆಯುತ್ತಿದ್ದಾರೆ. ಮರುದಿನ ಬೆಳಿಗ್ಗೆ ಎಚ್ಚರಗೊಂಡು ತರಬೇತಿಗೆ ಹೋಗುವ ಮೊದಲು ತಮ್ಮ ಸಾಮಾನ್ಯ ದಿನಚರಿ ಅನುಸರಿಸುತ್ತಾರೆ. ಜಪಾನ್ ತಲುಪುವ ಹೊತ್ತಿಗೆ ಕ್ರೀಡಾಪಟುಗಳಿಗೆ ವಸತಿ ಸೌಕರ್ಯ ಅಡ್ಡಿಯಾಗದಂತೆ ಭರವಸೆ ಮೂಡಿಸಲು ಈ ಪ್ರಯತ್ನ ನಡೆದಿದೆ.
ಎರಡು ವರ್ಷಗಳ ಹಿಂದೆ ಏಷ್ಯನ್ ಕ್ರೀಡಾಕೂಟದಲ್ಲಿ ವಸತಿ ಸೌಕರ್ಯವನ್ನು ಕ್ರೀಡಾ ಗ್ರಾಮದ ಬದಲಿಗೆ ಕಂಟೇನರ್ಗಳು, ಕ್ರೂಸ್ಗಳೆನ್ನುವ ವಿಶಿಷ್ಟ ಶೈಲಿಯಲ್ಲಿರುವ ಯೋಜನೆ ರೂಪಿಸಲಾಗಿತ್ತು. ಇದೀಗ ಕ್ರೀಡಾ ಸಚಿವರ ದೃಷ್ಟಿಕೋನವೆಂದರೆ ಆಟಗಾರರನ್ನು ಕಂಟೇನರ್ ಜೀವನಕ್ಕೆ ಒಗ್ಗಿಕೊಳ್ಳುವಂತೆ ಮಾಡುವುದು. ಅವರನ್ನು ಕ್ಲಾಸ್ಟ್ರೋಫೋಬಿಕ್ (ಇಕ್ಕಟ್ಟಿನ ಭೀತಿ) ಕಾಡದಂತೆ ಸಿದ್ಧಪಡಿಸಲಾಗುತ್ತಿದೆ. ಒತ್ತಡವಿಲ್ಲದೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಮುಂಚಿತವಾಗಿ ಸಿದ್ಧಡಪಡಿಸಲಾಗುತ್ತಿದೆ.
ವಿಶಾಲವಾದ ಕೊಠಡಿಗಳು ಮತ್ತು ತಮ್ಮ ಸಲಕರಣೆಗಳಿಗಾಗಿ ಮೀಸಲಾದ ಸ್ಥಳಗಳಿಗೆ ಒಗ್ಗಿಕೊಂಡಿರುವ ಕ್ರೀಡಾಪಟುಗಳಿಗೆ ಇಕ್ಕಟ್ಟಾದ ಸುತ್ತಮುತ್ತಲಿನ ಪ್ರದೇಶಕ್ಕೆ ಒಗ್ಗಿಕೊಳ್ಳಲು ಸಮಯ ಬೇಕಾಗುತ್ತದೆ. ಎರಡು ಬಾರಿ ಏಷ್ಯನ್ ಗೇಮ್ಸ್ ಚಾಂಪಿಯನ್ ಶಾಟ್ ಪುಟ್ ಆಟಗಾರ ತಜಿಂದರ್ಪಾಲ್ ಸಿಂಗ್ ಅವರಿಗೆ ಈ ಅನುಭವ ವ್ಯತ್ಯಾಸವುಂಟು ಮಾಡುತ್ತದೆ. “ಹೊರಗಿನಂತೆ ಚಿಕ್ಕದಾಗಿ ಕಂಡರೂ ಒಳಭಾಗ ಚೆನ್ನಾಗಿದೆ. ಎಲ್ಲಾ ಸೌಲಭ್ಯಗಳಿವೆ. ನೇರವಾಗಿ ಜಪಾನ್ಗೆ ಹೋಗಿದ್ದರೆ ಒಂದೆರಡು ದಿನ ಒಗ್ಗಿಕೊಳ್ಳಲು ಸಮಯ ಬೇಕಾಗುತ್ತಿತ್ತು” ಎಂದು ಮಾಧ್ಯಮಗಳಿಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಅನುಭವ ಆಗಸ್ಟ್ 28ರಿಂದ ಪ್ರಾರಂಭವಾಗಿದೆ. ಸುಮಾರು ಎಂಟು ಕ್ರೀಡಾಪಟುಗಳು ಈವರೆಗೆ ಕಂಟೇನರ್ನಲ್ಲಿ ಉಳಿದು ಅನುಭವ ಪಡೆದಿದ್ದಾರೆ. ಕ್ರೀಡಾ ಪ್ರಾಧಿಕಾರ ಪಟ್ಟಿ ಮಾಡಿಟ್ಟು ಸರದಿಯಲ್ಲಿ ಕ್ರೀಡಾಪಟುಗಳನ್ನು ಕಂಟೇನರ್ ಜೀವನದ ಅನುಭವಕ್ಕಾಗಿ ಕಳುಹಿಸುತ್ತಿದ್ದಾರೆ. ಅವರು ರಾತ್ರಿಯಿಡೀ ಅದರೊಳಗೆ ಇರಬೇಕಾಗುತ್ತದೆ. ಬೆಳಿಗ್ಗೆ ಎಂದಿನಂತೆ ಎದ್ದು ತಮ್ಮ ತರಬೇತಿಗೆ ಸಿದ್ಧವಾಗಬೇಕಾಗುತ್ತದೆ.
ಕಾಮನ್ವೆಲ್ತ್ ಕ್ರೀಡಾಕೂಟದ ಕಂಚಿನ ಪದಕ ವಿಜೇತೆ ಡಿಸ್ಕಸ್ ಆಟಗಾತಿ ಸೀಮಾ ಕಲಿರಾಮಣ್ಣ ಅವರಿಗೆ ಕಂಟೇನರ್ಗೆ ಹೊಂದಿಕೊಳ್ಳಲು ಸಮಯ ಬೇಕಾಯಿತು. “ಎರಡನೇ ದಿನ ಚೆನ್ನಾಗಿತ್ತು, ಸರಿಯಾಗಿ ನಿದ್ರೆ ಬಂತು. ಇಕ್ಕಟ್ಟಿನ ಭೀತಿ ಎದುರಾಗದಂತೆ ಉಳಿದುಕೊಳ್ಳಲು ಅನುಭವ ದೊರೆಯಿತು. ಈ ಅನುಭವ ಕೊಟ್ಟಿದ್ದಕ್ಕೆ ಕ್ರೀಡಾ ಪ್ರಾಧಿಕಾರಕ್ಕೆ ಧನ್ಯವಾದಗಳು” ಎಂದು ಅನುಭವ ಹಂಚಿಕೊಂಡಿದ್ದಾರೆ.
ಕ್ರೀಡಾ ಪ್ರಾಧಿಕಾರ ಸೀಮಿತ ಜಾಗದಲ್ಲೂ ಅವಳಿ ಬೆಡ್ರೂಂಗಳನ್ನು ನೀಡಿದೆ. ಕಿರಿದಾದ ಮಾರ್ಗದ ಸಂಪರ್ಕ ಹೊಂದಿದೆ. ಹವಾನಿಯಂತ್ರಣಗಳು, ಲಾಂಡ್ರಿ ಪ್ರದೇಶ, ರೆಫ್ರಿಜರೇಟರ್ ಮತ್ತು ಸಿಂಕ್ ಇರುವ ಅಡುಗೆಮನೆ, ಸ್ನಾನ ಗೃಹವನ್ನು ವಾಶ್ ಬೇಸಿನ್, ಶೌಚಾಲಯ ಮತ್ತು ಶವರ್ಗಾಗಿ ಪ್ರತ್ಯೇಕ ಸ್ಥಳಗಳಾಗಿ ವಿಂಗಡಿಸಲಾಗಿದೆ.
ಕೃಪೆ: indiatoday.in