ದೇವದತ್ತ ಪಡಿಕ್ಕಲ್‌ | Photo Credit : PTI

ದುಬೈ, ಸೆ. 2: ಭಾರತ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್ ಬುಧವಾರ ಬಿಡುಗಡೆಯಾದ ICC ಟೆಸ್ಟ್ ಬ್ಯಾಟರ್ ಗಳ ರ್ಯಾಂಕಿಂಗ್ ನಲ್ಲಿ ಎರಡು ಸ್ಥಾನ ಕುಸಿದು 9ನೇ ಸ್ಥಾನ ತಲುಪಿದ್ದಾರೆ. ಬೌಲರ್ ಗಳ ರ್ಯಾಂಕಿಂಗ್ ನಲ್ಲಿ ವೇಗಿ ಜಸ್ಪ್ರಿತ್ ಬುಮ್ರಾರನ್ನು ಹಿಂದಿಕ್ಕಿದ ಕಿವೀಸ್ ಬೌಲರ್ ಮ್ಯಾಟ್ ಹೆನ್ರಿ ಎರಡನೇ ಸ್ಥಾನಕ್ಕೇರಿದ್ದಾರೆ.

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶತಕ ಗಳಿಸಿದ್ದ ಕನ್ನಡಿಗ ದೇವದತ್ತ ಪಡಿಕ್ಕಲ್ ಐದು ಸ್ಥಾನ ಭಡ್ತಿ ಪಡೆದು 54ನೇ ರ್ಯಾಂಕಿಗೆ ತಲುಪಿದ್ದಾರೆ. ವಿಕೆಟ್‌ ಕೀಪರ್-ಬ್ಯಾಟರ್ ರಿಷಭ್ ಪಂತ್ ಭಾರತದ ಗರಿಷ್ಠ ರ್ಯಾಂಕಿನ ಟೆಸ್ಟ್ ಬ್ಯಾಟರ್ ಆಗಿ ಮುಂದುವರಿದಿದ್ದಾರೆ.

ಔಟಾಗದೆ 115 ರನ್ ಗಳಿಸಿದ್ದ ಧ್ರುವ ಜುರೆಲ್ 83ರಿಂದ 65ನೇ ಸ್ಥಾನಕ್ಕೆ ತಲುಪಿದ್ದಾರೆ. ಭಾರತದ ಸ್ಪಿನ್ನರ್ ಮಾನವ್ ಸುಥಾರ್ ನಾಲ್ಕು ಸ್ಥಾನ ಮೇಲಕ್ಕೇರಿ 44ನೇ ಸ್ಥಾನ ಹಾಗೂ ಮುಹಮ್ಮದ್ ಸಿರಾಜ್ 17ನೇ ಸ್ಥಾನದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor