Photo Credit : @BCCI

ಹೊಸದಿಲ್ಲಿ: ಜಪಾನ್‌ನಲ್ಲಿ ನಡೆಯಲಿರುವ ಏಶ್ಯನ್ ಗೇಮ್ಸ್‌ನಲ್ಲಿ ವಸತಿ ವ್ಯವಸ್ಥೆಗೆ ಸಂಬಂಧಿಸಿದ ಬಿಕ್ಕಟ್ಟಿನ ಕುರಿತು ವರದಿಗಳು ಬರುತ್ತಿರುವಂತೆಯೇ ಭಾರತೀಯ ಕ್ರಿಕೆಟ್ ಮಂಡಳಿ(ಬಿಸಿಸಿಐ)ಪುರುಷರ ಕ್ರಿಕೆಟ್ ತಂಡಕ್ಕೆ ತನ್ನದೇ ಆದ ವಸತಿ ವ್ಯವಸ್ಥೆ ಕಲ್ಪಿಸಿದೆ.

ತಂಡದ ಗಾತ್ರವು ಅನುಮತಿಗಿಂತ ದೊಡ್ಡದಾಗಿದ್ದ ಕಾರಣ ಬಿಸಿಸಿಐ ಪುರುಷರ ತಂಡಕ್ಕೆ ಪ್ರತ್ಯೇಕ ವಸತಿ ವ್ಯವಸ್ಥೆ ಮಾಡಿದೆ. ಪಂದ್ಯಾವಳಿಯಲ್ಲಿ ಪುರುಷರ ತಂಡ ತೊಂದರೆಗೆ ಒಳಗಾಗುವುದನ್ನು ನಾವು ಬಯಸುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದಾರೆ.

ಭಾರತೀಯ ಮಹಿಳಾ ತಂಡವು 20 ಸದಸ್ಯರನ್ನು ಹೊಂದಿರುವ ಕಾರಣ ಆಯೋಜನಾ ಸಮಿತಿಯು ಒದಗಿಸಿರುವ ವ್ಯವಸ್ಥೆಯಲ್ಲೇ ತಂಗಿದೆ ಎಂದು ಸೈಕಿಯಾ ಹೇಳಿದ್ದಾರೆ.

ನಾವು ಸಂಘಟನಾ ಸಮಿತಿಯ ಮೇಲೆ ಸಂಪೂರ್ಣ ವಿಶ್ವಾಸ ಇರಿಸಿದ್ದೇವೆ. ಇದೊಂದು ದೊಡ್ಡ ಸ್ಪರ್ಧಾವಳಿಯಾಗಿದ್ದು, ನಾವು ಅಕ್ಟೋಬರ್ 1ರಂದು ಅಲ್ಲಿಗೆ ತೆರಳಿದಾಗ ಉತ್ತಮ ವ್ಯವಸ್ಥೆ ಕಲ್ಪಿಸುವ ಖಚಿತತೆ ಇದೆ. ಆನಂತರ ಪರಿಸ್ಥಿತಿಯ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಸೈಕಿಯಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor