Photo Credit: ddindia

ಕಾರ್ಡಿಫ್: ಶ್ರೀಲಂಕಾ ಕ್ರಿಕೆಟ್ ತಂಡವನ್ನು ಆರು ವಿಕೆಟ್‌ಗಳ ಅಂತರದಿಂದ ಮಣಿಸಿರುವ ಆತಿಥೇಯ ಇಂಗ್ಲೆಂಡ್ ತಂಡವು ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಸರಣಿ ಗೆದ್ದುಕೊಂಡಿದೆ.

ಶುಕ್ರವಾರ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಶ್ರೀಲಂಕಾ ತಂಡಕ್ಕೆ ಪಥುಮ್ ನಿಸ್ಸಾಂಕ(37 ರನ್)ಬಿರುಸಿನ ಆರಂಭ ನೀಡಿದರು. ಆದರೆ ಲಿಯಾಮ್ ಡಾಸನ್(3-32)ಹಾಗೂ ಜಮೀ ಓವರ್ಟನ್(2-23)ಪ್ರವಾಸಿ ತಂಡವನ್ನು 9 ವಿಕೆಟ್‌ಗಳ ನಷ್ಟಕ್ಕೆ 145 ರನ್‌ಗೆ ನಿಯಂತ್ರಿಸಿದರು.

ಇಂಗ್ಲೆಂಡ್ ತಂಡವು ಪವರ್‌ಪ್ಲೇ ವೇಳೆ ಇಬ್ಬರೂ ಆರಂಭಿಕರನ್ನು ಕಳೆದುಕೊಂಡಿತು. ಆದರೆ ತನ್ನ ಆಕ್ರಮಣಕಾರಿ ಆಟವನ್ನು ಕಾಯ್ದುಕೊಂಡಿತು. ಹ್ಯಾರಿ ಬ್ರೂಕ್(ಔಟಾಗದೆ 52, 24 ಎಸೆತ)ಮೂರು ಸಿಕ್ಸರ್‌ಗಳನ್ನು ಸಿಡಿಸಿ ಮಿಂಚಿದರು. ಬಟ್ಲರ್ 30 ರನ್ ಗಳಿಸಿದ್ದು, ಇಂಗ್ಲೆಂಡ್ ತಂಡವು 12.1 ಓವರ್‌ಗಳಲ್ಲಿ ಇನ್ನೂ 47 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor