Asian Para Games | 100 ಮೀಟರ್ ಟಿ12 ಸ್ಪರ್ಧೆ: ಸಿಮ್ರಾನ್ ಗೆ ಕೂಟ ದಾಖಲೆಯೊಂದಿಗೆ ಚಿನ್ನ
Photo Credit: Special arrangement
ನಗೋಯ, ಅ. 21: ಏಶ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಬುಧವಾರ ಭಾರತೀಯ ಓಟಗಾರ್ತಿ ಸಿಮ್ರಾನ್ ಶರ್ಮಾ ಮಹಿಳೆಯರ 100 ಮೀಟರ್ ಸ್ಪರ್ಧೆಯ ಟಿ12 ವಿಭಾಗದಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದಾರೆ. ಅವರು 12.02 ಸೆಕೆಂಡುಗಳಲ್ಲಿ ಓಟವನ್ನು ಪೂರ್ಣಗೊಳಿಸಿದರು.
ಇದು ಈ ಕ್ರೀಡಾಕೂಟದಲ್ಲಿ ಅವರು ಗೆದ್ದ ಎರಡನೇ ಚಿನ್ನದ ಪದಕವಾಗಿದೆ. ಮಂಗಳವಾರ ನಡೆದ 200 ಮೀಟರ್ ಸ್ಪರ್ಧೆಯಲ್ಲೂ ಅವರು ಹೊಸ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರು.
ಬುಧವಾರ ಇರಾನ್ ನ ಹಜಾರ್ ಸಫರ್‌ಜಾದೆ 12.30 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದರೆ, ಇಂಡೊನೇಷ್ಯಾದ ಮಾದೆ ನಿ ಪುತ್ರಿ 12.51 ಸೆಕೆಂಡುಗಳಲ್ಲಿ ಓಟ ಮುಗಿಸಿ ಮೂರನೇ ಸ್ಥಾನ ಪಡೆದರು.
ಟಿ12 ವಿಭಾಗದಲ್ಲಿ ಮಧ್ಯಮ ದೃಷ್ಟಿಮಾಂದ್ಯತೆ ಹೊಂದಿರುವ ಕ್ರೀಡಾಪಟುಗಳು ಸ್ಪರ್ಧಿಸುತ್ತಾರೆ.
2024ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ 26 ವರ್ಷದ ಸಿಮ್ರಾನ್ ಕಂಚಿನ ಪದಕ ಗೆದ್ದಿದ್ದರು.
2023ರ ಹಾಂಗ್‌ಝೂ ಏಶ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾಗವಹಿಸಿದ್ದ ಎರಡೂ ಸ್ಪರ್ಧೆಗಳಲ್ಲಿ ಸಿಮ್ರಾನ್ ಬೆಳ್ಳಿ ಪದಕಗಳನ್ನು ಗೆದ್ದಿದ್ದರು.