×
Ad

ಆಸ್ಟ್ರೇಲಿಯನ್ ಓಪನ್ | ಪಿವಿ ಸಿಂಧು ಪ್ರಿ-ಕ್ವಾರ್ಟರ್ ಫೈನಲ್‌ಗೆ ಲಗ್ಗೆ

Update: 2026-06-10 21:59 IST

 ಪಿವಿ ಸಿಂಧು | Photo Credit : PTI  

ಸಿಡ್ನಿ, ಜೂ.10: ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ ಸಿಂಧು ಸುಲಭ ಗೆಲುವು ದಾಖಲಿಸಿ ಆಸ್ಟ್ರೇಲಿಯನ್ ಓಪನ್ ಸೂಪರ್-500 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಿ-ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದರು.

ಮೂರನೇ ಶ್ರೇಯಾಂಕದ ಸಿಂಧು ಅವರಲ್ಲದೆ, ತನ್ವಿ ಶರ್ಮಾ, ಮಾಳವಿಕಾ ಬಾನ್ಸೋಡ್, ಇಶಾರಾಣಿ ಬರುಚಾ ಹಾಗೂ ತನ್ಯಾ ಹಿರೇಮಠ್ ಕೂಡ ಅಂತಿಮ-16ರ ಸುತ್ತು ಪ್ರವೇಶಿಸಿದರು. ಭಾರತದ ಆಟಗಾರರಾದ ಕಿರಣ್ ಜಾರ್ಜ್, ಮನ್ನೆಪಲ್ಲಿ ಹಾಗೂ ಕ್ವಾಲಿಫೈಯರ್ ಸನೀತ್ ದಯಾನಂದ್ ಮೊದಲ ಸುತ್ತಿನಲ್ಲಿ ಸೋತು ನಿರ್ಗಮಿಸಿದರು.

ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಸಿಂಧು ಕೇವಲ 32 ನಿಮಿಷಗಳ ಹಣಾಹಣಿಯಲ್ಲಿ ಪೆರು ಆಟಗಾರ್ತಿ ಇನೆಸ್ ಕಾಸ್ಟಿಲ್ಲೊ ಸಲಾಝರ್‌ರನ್ನು 21-13, 21-11 ಗೇಮ್‌ಗಳ ಅಂತರದಿಂದ ಮಣಿಸಿದರು.

ಸಿಂಧು ಮುಂದಿನ ಸುತ್ತಿನಲ್ಲಿ ತಮ್ಮದೇ ದೇಶದ ಇಶಾರಾಣಿ ಅವರನ್ನು ಎದುರಿಸಲಿದ್ದಾರೆ. ರಾಣಿ ಚೀನಾದ ಹಾನ್ ಕ್ಸಿಯಾನ್‌ರನ್ನು 22-20, 10-21, 21-14 ಗೇಮ್‌ಗಳ ಅಂತರದಿಂದ ಮಣಿಸಿದರು.

17ರ ವಯಸ್ಸಿನ ತನ್ವಿ ವಿಶ್ವದ ನಂ.11ನೇ ಆಟಗಾರ್ತಿ ಚಿಯು ಪಿನ್-ಚಿಯಾನ್‌ರನ್ನು 45 ನಿಮಿಷಗಳಲ್ಲಿ 21-12, 22-20 ಗೇಮ್‌ಗಳ ಅಂತರದಿಂದ ಮಣಿಸಿದರು.

ಪುರುಷರ ಸಿಂಗಲ್ಸ್‌ನಲ್ಲಿ ಕಿರಣ್ ಜಾರ್ಜ್ ಅವರು ಮಲೇಶ್ಯದ ಜಸ್ಟಿನ್ ಹೋಹ್ ವಿರುದ್ಧ 19-21, 21-14, 15-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

ಕ್ವಾಲಿಫೈಯರ್ ದಯಾನಂದ್ ಅವರು ಚೀನಾದ ಹು ಝಿಯಾನ್ ವಿರುದ್ಧ 8-21, 10-21 ಅಂತರದಿಂದ ಸೋತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News