×
Ad

ನಾಲ್ಕು ವರ್ಷಗಳ ನಂತರ ಟೆನಿಸ್‌ಗೆ ಮರಳಿದ ಸೆರೆನಾ ವಿಲಿಯಮ್ಸ್

Update: 2026-06-10 22:03 IST

ಸೆರೆನಾ ವಿಲಿಯಮ್ಸ್ |Photo Credit : PTI 

ಲಂಡನ್, ಜೂ.10: ಸುಮಾರು ನಾಲ್ಕು ವರ್ಷಗಳಿಂದ ವೃತ್ತಿಪರ ಟೆನಿಸ್‌ನಿಂದ ದೂರ ಉಳಿದಿದ್ದ ಅಮೆರಿಕದ ಲೆಜೆಂಡ್ ಸೆರೆನಾ ವಿಲಿಯಮ್ಸ್, ಕ್ವೀನ್ಸ್ ಕ್ಲಬ್ ಟೆನಿಸ್ ಟೂರ್ನಿಯಲ್ಲಿ ಗೆಲುವು ದಾಖಲಿಸಿ ತನ್ನಲ್ಲಿ ಇನ್ನೂ ಶಕ್ತಿಯಿದೆ ಎಂದು ತೋರಿಸಿಕೊಟ್ಟಿದ್ದಾರೆ.

44ರ ವಯಸ್ಸಿನ ಸೆರೆನಾ ಕೆನಡಾದ 19ರ ವಯಸ್ಸಿನ ವಿಕ್ಟೋರಿಯಾ ಎಂಬೊಕೊ ಜೊತೆಗೂಡಿ ಮಂಗಳವಾರ ನಡೆದ ಮಹಿಳೆಯರ ಡಬಲ್ಸ್ ವಿಭಾಗದ ಆರಂಭಿಕ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಜೋಡಿ ನಿಕೊಲ್ ಮಿಲಿಚಾರ್-ಮಾರ್ಟಿನೆಝ್ ಹಾಗೂ ಎರಿನ್ ರೌಟ್ಲಿಫ್‌ರನ್ನು 7-6(2), 6-2 ಸೆಟ್‌ಗಳ ಅಂತರದಿಂದ ಮಣಿಸಿದರು.

ಸೆರೆನಾ ವಿಲಿಯಮ್ಸ್ 2022ರ ಯು.ಎಸ್. ಓಪನ್ ಟೂರ್ನಿಯ ನಂತರ ಮೊದಲ ವೃತ್ತಿಪರ ಪಂದ್ಯವನ್ನಾಡಿದರು.

ಸೆರೆನಾ-ವಿಕ್ಟೋರಿಯಾ ಜೋಡಿಯು ಕ್ವಾರ್ಟರ್ ಫೈನಲ್‌ನಲ್ಲಿ ಲೇಲಾ ಫೆರ್ನಾಂಡಿಝ್ ಹಾಗೂ ಲೌರಾ ಸೀಝ್ಮಂಡ್‌ರನ್ನು ಎದುರಿಸಲಿದ್ದಾರೆ.

ಸೆರೆನಾ ಅವರು ಟೆನಿಸ್‌ನಿಂದ ದೂರ ಸರಿಯುವ ಮೊದಲು ವಿಂಬಲ್ಡನ್‌ನಲ್ಲಿ ಏಳು ಸಹಿತ ಒಟ್ಟು 23 ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ತನ್ನ ಹಿರಿಯ ಸಹೋದರಿ ವೀನಸ್ ವಿಲಿಯಮ್ಸ್ ಜೊತೆಗೂಡಿ ವಿಂಬಲ್ಡನ್‌ನಲ್ಲಿ ಆರು ಸಹಿತ 14 ಗ್ರ್ಯಾನ್‌ಸ್ಲಾಮ್ ಡಬಲ್ಸ್ ಪ್ರಶಸ್ತಿಗಳನ್ನು ಜಯಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News