×
Ad

FIFA World Cup 2026 | ತಂಡಕ್ಕೆ ಆಪದ್ಬಾಂಧವನಾದ ರೊಮೆಲು: ಈಜಿಪ್ಟ್ ವಿರುದ್ಧ ಡ್ರಾ ಸಾಧಿಸಿದ ಬೆಲ್ಜಿಯಂ

Update: 2026-06-16 07:56 IST

Photo: screengrab/x.com/Sports_City247

ಸಿಯಾಟೆಲ್ : ಫಿಫಾ ವಿಶ್ವಕಪ್ ಟೂರ್ನಿಯ ಬೆಲ್ಜಿಯಂ-ಈಜಿಪ್ಟ್ ನಡುವಿನ ಪಂದ್ಯದಲ್ಲಿ ಎರಡನೇ ಅವಧಿಯಲ್ಲಿ ಬದಲಿ ಆಟಗಾರನಾಗಿ ಮೈದಾನಕ್ಕೆ ಇಳಿದ ರೊಮೆಲು ಲುಕಾಕು ತಂಡದ ಪಾಲಿಗೆ ಆಪದ್ಭಾಂಧವ ಎನಿಸಿ, ಈಜಿಪ್ಟ್ ವಿರುದ್ಧ 1-1 ಡ್ರಾ ಸಾಧಿಸಲು ನೆರವಾದರು.

ಸಿಯಾಟೆಲ್‌ನಲ್ಲಿ ನಡೆದ ಜಿ ಗುಂಪಿನ ಪಂದ್ಯದಲ್ಲಿ ವಿರಾಮದ ವೇಳೆಗೆ ಈಜಿಪ್ಟ್ ವಿರುದ್ಧ ಬಲಿಷ್ಠ ಬೆಲ್ಜಿಯಂ ತಂಡ ಹಿನ್ನಡೆಯತ್ತಿತ್ತು. ಪಂದ್ಯದ 20ನೇ ನಿಮಿಷದಲ್ಲೇ ಮೊಹ್ಮದ್ ಸಲಾಹ್ ಅವರ ಜಾಣ್ಮೆಯ ಪಾಸನ್ನು ಎಮಾಮ್ ಅಶೋರ್ ಗೋಲಾಗಿ ಪರಿವರ್ತಿಸಿ ಈಜಿಪ್ಟ್‌ಗೆ ಮುನ್ನಡೆ ದೊರಕಿಸಿಕೊಟ್ಟಿದ್ದರು.

ಆದಾಗ್ಯೂ ಮೈದಾನಕ್ಕೆ ಬಂದ ಕೆಲವೇ ಕ್ಷಣಗಳಲ್ಲಿ ಮೊಹ್ಮದ್ ಹನೇ ಅವರು ಸ್ವಯಂ ಗೋಲು ಹೊಡೆಯುವ ಅನಿವಾರ್ಯ ಸ್ಥಿತಿ ಸೃಷ್ಟಿಸಿದರು. ಇದರಿಂದ ಬೆಲ್ಜಿಯಂ ತಂಡ ಸಮಬಲ ಸಾಧಿಸಿತು. ಇದಕ್ಕೂ ಮುನ್ನ ಕೆವಿನ್ ಡೆ ಬ್ರೂಯೆನ್ ಫ್ರೀಕಿಕ್‌ನಲ್ಲಿ ಹೊಡೆದ ಚೆಂಡು ಗೋಲುಪೆಟ್ಟಿಗೆಯ ಕಂಬಕ್ಕೆ ಬಡಿಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News