ವಿಶ್ವ ಚೆಸ್ ಫೆಡರೇಶನ್ ಅಧ್ಯಕ್ಷರಾಗಿ ವಿಶ್ವನಾಥನ್ ಆನಂದ್ ಆಯ್ಕೆ

Update: 2026-07-24 21:57 IST

 ವಿಶ್ವನಾಥನ್ ಆನಂದ್ | Photo Credit : PTI 

ಹೊಸದಿಲ್ಲಿ, ಜು.24: ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರು ವಿಶ್ವ ಚೆಸ್ ಒಕ್ಕೂಟದ(ಫಿಡೆ)ಹಂಗಾಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಈ ತನಕ ಅಧ್ಯಕ್ಷರಾಗಿದ್ದ ಅರ್ಕಾಡಿ ದ್ವೊರ್ಕೊವಿಚ್ ಅವರ ಹೆಸರು ರಶ್ಯ-ಉಕ್ರೇನ್ ಯುದ್ದಕ್ಕೆ ಸಂಬಂಧಿಸಿ ಯುರೋಪಿಯನ್ ಯೂನಿಯನ್‌ನ ನಿರ್ಬಂಧಿತ ವ್ಯಕ್ತಿಗಳ ಪಟ್ಟಿಗೆ ಸೇರ್ಪಡೆಯಾಗಿದೆ. ಹೀಗಾಗಿ ಅವರು ರಾಜೀನಾಮೆ ನೀಡಿದ್ದರು. ಆನಂದ್ ಅವರು 2002ರಿಂದ ಫಿಡೆ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ರಶ್ಯದವರಾದ ದ್ವೊರ್ಕೊವಿಚ್ ಅವರು ಯುರೋಪಿಯನ್ ಯೂನಿಯನ್ ನಿರ್ಧಾರ ಪ್ರಶ್ನಿಸಲು ಮುಂದಾಗಿದ್ದಾರೆ. ಇಯು ನಿರ್ಧಾರದಿಂದ ಅವರ ಬ್ಯಾಂಕ್ ಖಾತೆ ಸ್ಥಗಿತಗೊಳಿಸಲಾಗಿದೆ. ಅವರ ಪ್ರಯಾಣಕ್ಕ ನಿರ್ಬಂಧ ಹೇರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News