ಡೈಮಂಡ್ ಲೀಗ್: ಕಾಮನ್‌ವೆಲ್ತ್‌ಗೆ ಅರ್ಹತೆ ಪಡೆದ ನೀರಜ್ ಚೋಪ್ರಾ
Update: 2026-06-20 08:48 IST
ನೀರಜ್ ಚೋಪ್ರಾ Photo: screengrab/x.com/TheKhelIndia
ದೋಹಾ: ದೋಹಾ ಡೈಮಂಡ್ ಲೀಗ್‌ನಲ್ಲಿ ಭಾರತದ ಖ್ಯಾತ ಅಥ್ಲೀಟ್ ನೀರಜ್ ಚೋಪ್ರಾ ನಾಲ್ಕನೇ ಸ್ಥಾನ ಗಳಿಸಿ ಮುಂಬರುವ ಕಾಮನ್‌ವೆಲ್ತ್ ಕೂಟಕ್ಕೆ ಅರ್ಹತೆ ಸಂಪಾದಿಸಿದರು. ಶುಕ್ರವಾರ ನಡೆದ ಲೀಗ್‌ನಲ್ಲಿ 85.69 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ನಾಲ್ಕನೇ ಸ್ಥಾನ ಗಳಿಸಿದರೆ, 88.68 ಮೀಟರ್‌ನೊಂದಿಗೆ ಶ್ರೀಲಂಕಾದ ರುಮೇಶ್ ಪತಿರಂಗೆ ಅಗ್ರಸ್ಥಾನಿಯಾದರು.
ಗ್ರೆನಾಡಾದ ಆ್ಯಂಡರ್ಸನ್ ಪೀಟರ್ಸ್ (86.38) ಮತ್ತು ಅಮೆರಿಕದ ಕರ್ಟಿಸ್ ಥಾಂಪ್ಸನ್ (85.99) ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಗಳಿಸಿದರು. ಬೆನ್ನು ಗಾಯದ ಸಮಸ್ಯೆಯಿಂದ ವಾಪಸ್ಸಾಗಿರುವ ನೀರಜ್ ಪ್ರಥಮ ಎಸೆತದಲ್ಲಿ ಫೌಲ್ ಆದರು. ಎರಡನೇ ಥ್ರೋನಲ್ಲಿ 82.77 ಮೀಟರ್ ದೂರಕ್ಕೆ ಎಸೆದು ಕಾಮನ್‌ವೆಲ್ತ್ ಗೇಮ್ಸ್-2026ಕ್ಕೆ ಅರ್ಹತೆ ಸಂಪಾದಿಸಿದರು. ಮೂರನೇ ಪ್ರಯತ್ನದಲ್ಲಿ ನೀರಜ್ ಅವರ ಅತ್ಯುತ್ತಮ ಥ್ರೋ ಮೂಡಿಬಂತು.