ಫಿಫಾ ವಿಶ್ವಕಪ್‌ನಲ್ಲಿ ವೇಗದ ಗೋಲು ಗಳಿಸಿದ ಇಸ್ಮಾಯಿಲ್ ಸೈಬರಿ
ಇಸ್ಮಾಯಿಲ್ ಸೈಬರಿ Photo: x.com/NST_Online
ಬೋಸ್ಟನ್ : ಮೊರಾಕ್ಕೊ ತಂಡದ ಫುಟ್ಬಾಲ್ ತಾರೆ ಇಸ್ಮಾಯಿಲ್ ಸೈಬರಿ ಶುಕ್ರವಾರ ಸ್ಕಾಟ್ಲೆಂಡ್ ತಂಡದ ವಿರುದ್ಧ ನಡೆದ ಫಿಫಾ ವಿಶ್ವಕಪ್ ಪಂದ್ಯದ 71ನೇ ಸೆಕೆಂಡ್‌ನಲ್ಲೇ ಗೋಲು ಗಳಿಸುವ ಮೂಲಕ ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಅತಿವೇಗದ ಗೋಲು ಗಳಿಸಿದ ದಾಖಲೆ ನಿರ್ಮಿಸಿದರು. ಪಂದ್ಯದಲ್ಲಿ ಮೊರಾಕ್ಕೊ ತಂಡ 1-0 ಗೆಲುವು ಸಾಧಿಸುವ ಮೂಲಕ ನಾಕೌಟ್ ಹಂತಕ್ಕೇರುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಬ್ರೆಜಿಲ್ ವಿರುದ್ಧ 1-1 ಗೋಲುಗಳ ಡ್ರಾ ಸಾಧಿಸಿದ್ದ ಪಂದ್ಯದಲ್ಲೂ ಇಸ್ಮಾಯಿಲ್ ಗೋಲು ಗಳಿಸಿದ್ದರು.
ಸ್ಪೇನ್‌ನಲ್ಲಿ ಹುಟ್ಟಿ ಬೆಲ್ಜಿಯಂನಲ್ಲಿ ಬೆಳೆದ 25 ವರ್ಷ ವಯಸ್ಸಿನ ಇಸ್ಮಾಯಿಲ್, ಡಚ್ ಚಾಂಪಿಯನ್ ಪಿಎಸ್ವಿ ಇಂಡೋವೆನ್ ತಂಡದಿಂದ ಬಯೆರ್ನ್ ಮ್ಯೂನಿಚ್ ತಂಡ ಸೇರಲು ಸಜ್ಜಾಗಿದ್ದು, 55 ದಶಲಕ್ಷ ಯೂರೊ (63 ದಶಲಕ್ಷ ಡಾಲರ್)ಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸ್ಕಾಟ್ಲೆಂಡ್ ತಂಡದ ಗೋಲ್‌ಕೀಪರ್ ಅಂಗುಸ್ ಗುನ್ ಅವರನ್ನು ವಂಚಿಸಿದ ಇಸ್ಮಾಯಿಲ್ ಹೊಡೆದ ಗುಣಮಟ್ಟ ಅವರ ಬಗ್ಗೆ ವಿಶೇಷ ಆಕರ್ಷಣೆ ಏಕಿದೆ ಎನ್ನುವುದಕ್ಕೆ ಮತ್ತು ಎದುರಾಳಿ ತಂಡದ ಗುಣಮಟ್ಟಕ್ಕೆ ಹಿಡಿದ ಕನ್ನಡಿಯಾಗಿದೆ ಹಾಗೂ ಮೊರಾಕ್ಕೊ ತಂಡ ಫಿಫಾ ರ್ಯಾಂಕ್‌ನಲ್ಲಿ 5ನೇ ಸ್ಥಾನದಲ್ಲಿರಲು ಕಾರಣವೇನು ಮತ್ತು ಸ್ಕಾಟ್ಲೆಂಡ್ 40ನೇ ರ್ಯಾಂಕ್‌ನಲ್ಲಿ ಇರಲು ಏನು ಕಾರಣ ಎನ್ನುವುದನ್ನು ಸೂಚಿಸುತ್ತದೆ.