×
Ad

FIFA 2026 | ಹೈಟಿ ವಿರುದ್ಧ ಬ್ರೆಝಿಲ್ ಗೆ 3-0 ಅಂತರದ ಗೆಲುವು

Update: 2026-06-20 13:12 IST

ಮ್ಯಾಥ್ಯೂಸ್ ಕುನ್ಹಾ (Photo credit: X/@FIFAWorldCup)

ಫಿಲಡೆಲ್ಫಿಯಾ: ಮ್ಯಾಥ್ಯೂಸ್ ಕುನ್ಹಾ ಅವರ ಅವಳಿ ಗೋಲುಗಳ ನೆರವಿನಿಂದ ಬ್ರೆಝಿಲ್ ತಂಡವು ಹೈಟಿ ವಿರುದ್ಧ 3-0 ಅಂತರದ ಗೆಲುವು ಸಾಧಿಸಿದೆ. ಈ ಮೂಲಕ ಸಿ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ.

ಮೊದಲ ಪಂದ್ಯದಲ್ಲಿ ಡ್ರಾ ಗೆ ತೃಪ್ತಿಪಟ್ಟುಕೊಂಡಿದ್ದ ಬ್ರೆಝಿಲ್ ತಂಡ ಈ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿತ್ತು.

ಪಂದ್ಯದ 23ನೇ ನಿಮಿಷದಲ್ಲಿ ಕುನ್ಹಾ ಬ್ರೆಝಿಲ್ ಗೆ ಮೊದಲ ಗೋಲು ಗಳಿಸಿದರು. ಬಳಿಕ ಕುನ್ಹಾ 36ನೇ ನಿಮಿಷದಲ್ಲಿ 2ನೇ ಗೋಲು ಗಳಿಸಿದರೆ, ವಿನೀಶಿಯಸ್ ಜೂನಿಯರ್ ತಂಡಕ್ಕೆ 3 ನೇ ಗೋಲು ತಂದುಕೊಟ್ಟರು.

ಹೈಟಿ ತಂಡಕ್ಕೆ ಯಾವುದೇ ಮೇಲುಗೈ ಗೆ ಅವಕಾಶ ನೀಡದ ಬ್ರೆಝಿಲ್ ಅರ್ಹವಾಗಿಯೇ ಪಂದ್ಯವನ್ನು ಜಯಿಸಿತು. ಆದರೆ 40ನೇ ನಿಮಿಷದಲ್ಲಿ ವಿಂಗರ್ ರಾಫಿನ್ಹಾ ಅವರು ಸ್ನಾಯು ಸೆಳೆತದಿಂದಾಗಿ ಮೈದಾನದಿಂದ ಹೊರನಡೆದು ತಂಡದ ಗಾಯದ ಪಟ್ಟಿಗೆ ಹೊಸ ಸೇರ್ಪಡೆಯಾದರು.

ಸ್ಟಾರ್‌ ಆಟಗಾರ ನೇಯ್ಮರ್ ಮಂಡಿ ಸ್ನಾಯು ನೋವಿನಿಂದ ಚೇತರಿಸಿಕೊಳ್ಳದ ಕಾರಣ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News