×
Ad

FIFA 2026: ಆಸ್ಟ್ರೇಲಿಯಾದ ವಿರುದ್ಧ ಅಮೆರಿಕ ತಂಡಕ್ಕೆ 2-0 ಅಂತರದ ಗೆಲುವು

Update: 2026-06-20 14:49 IST

Photo credit: X/@FIFAWorldCup

ಸಿಯಾಟಲ್: ಆಸ್ಟ್ರೇಲಿಯಾದ ವಿರುದ್ಧ ನಡೆದ ಪಂದ್ಯದಲ್ಲಿ ಅಮೆರಿಕ ತಂಡವು 2-0 ಅಂತರದಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ವಿಶ್ವಕಪ್ ನ ನಾಕೌಟ್ ಹಂತದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಪಂದ್ಯದ 11ನೇ ನಿಮಿಷದಲ್ಲಿ ಆಸ್ಟ್ರೇಲಿಯಾದ ಆಟಗಾರ ಕ್ಯಾಮರೂನ್ ಬರ್ಗೆಸ್ ಒಜಿ ಗೋಲು ಮೂಲಕ ಅಮೆರಿಕ ತಂಡಕ್ಕೆ ಮೊದಲ ಮುನ್ನಡೆಗೆ ಕಾರಣವಾದರು.

ಮೊದಲ ಅವಧಿಯ ಕೊನೆಯ ನಿಮಿಷಗಳಲ್ಲಿ ಅಲೆಕ್ಸ್ ಫ್ರೀಮನ್ ಹೆಡರ್ ಮೂಲಕ ಎರಡನೇ ಗೋಲು ಗಳಿಸಿ ತಂಡಕ್ಕೆ 2-0 ಮುನ್ನಡೆ ತಂದುಕೊಟ್ಟರು.

ಅಮೆರಿಕ ತಂಡವು ಜೂನ್ 26 ರಂದು ಲಾಸ್ ಏಂಜಲೀಸ್ ನಲ್ಲಿ ಟರ್ಕಿ ವಿರುದ್ಧ ತನ್ನ ಕೊನೆಯ ಗ್ರೂಪ್ ಹಂತದ ಪಂದ್ಯವನ್ನು ಆಡಲಿದ್ದರೆ, ಆಸ್ಟ್ರೇಲಿಯಾ ತಂಡವು ತನ್ನ ಅಂತಿಮ ಪಂದ್ಯದಲ್ಲಿ ಪರಾಗ್ವೆಯನ್ನು ಎದುರಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News