×
Ad

FIFA ವಿಶ್ವಕಪ್ : ರೊನಾಲ್ಡೊ ದಾಖಲೆ ಮುರಿದ ಇಂಗ್ಲೆಂಡ್ ನಾಯಕ ಹ್ಯಾರಿ ಕೇನ್

Update: 2026-06-29 08:32 IST

Photo credit : X@HKane

ಇಂಗ್ಲೆಂಡ್ ಫುಟ್ಬಾಲ್ ತಂಡದ ನಾಯಕ ಹ್ಯಾರಿ ಕೇನ್ 2025-26ನೇ ಸೀಸನ್‍ನಲ್ಲಿ 70 ಗೋಲುಗಳನ್ನು ಬಾರಿಸುವ ಮೂಲಕ ಪೋರ್ಚ್‍ಗಲ್‍ನ ದಂತಕಥೆ ಎನಿಸಿದ ರೊನಾಲ್ಡೊ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. 21ನೇ ಶತಮಾನದಲ್ಲಿ ಒಂದೇ ಸೀಸನ್‍ನಲ್ಲಿ ಅತಿಹೆಚ್ಚು ಗೋಲು ಗಳಿಸಿದವರ ಪೈಕಿ ಕೇನ್ ಇದೀಗ ಎರಡನೇ ಸ್ಥಾನದಲ್ಲಿದ್ದಾರೆ.

ಮೆಸ್ಸಿ 2011-12ನೇ ಸೀಸನ್‍ನಲ್ಲಿ 82 ಗೋಲುಗಳನ್ನು ಬಾರಿಸಿದ್ದು ಸರ್ವಕಾಲಿಕ ದಾಖಲೆಯಾಗಿದೆ. 2012-13ರಲ್ಲಿ ಮೆಸ್ಸಿ 69 ಗೋಲುಗಳನ್ನು ದಾಖಲಿಸಿದ್ದರು. ಕ್ರಿಸ್ಟಿಯಾನೊ ರೊನಾಲ್ಡೊ ಕೂಡಾ 2011-12 ಹಾಗೂ 2014-15ರಲ್ಲಿ 69 ಗೋಲುಗಳನ್ನು ಬಾರಿಸಿ ಎರಡನೇ ಸ್ಥಾನದಲ್ಲಿದ್ದರು. ಆಧುನಿಕ ಫುಟ್ಬಾಲ್‍ನಲ್ಲಿ ಒಂದೇ ಸೀಸನ್‍ನಲ್ಲಿ ಅತಿಹೆಚ್ಚು ಗೋಲುಗಳನ್ನು ಗಳಿಸಿದ ಆಟಗಾರರ ಪೈಕಿ ಇದೀಗ ಕೇನ್ ಎರಡನೇ ಸ್ಥಾನದಲ್ಲಿದ್ದಾರೆ.

ಶನಿವಾರ ಪನಾಮಾ ತಂಡದ ವಿರುದ್ಧ ಕೊನೆಯ ಲೀಗ್ ಪಂದ್ಯವನ್ನಾಡಿದ ಇಂಗ್ಲೆಂಡ್ ನಾಯಕ 62ನೇ ನಿಮಿಷದಲ್ಲಿ ಪ್ರಸಕ್ತ ಸೀಸನ್‍ನ 70ನೇ ಗೋಲು ಗಳಿಸಿದರು. ಇದು ಕೇನ್ ಪಾಲಿಗೆ 11ನೇ ವಿಶ್ವಕಪ್ ಗೋಲಾಗಿದ್ದು, ವಿಶ್ವಕಪ್‍ನಲ್ಲಿ ಅತಿಹೆಚ್ಚು ಗೋಲು ಗಳಿಸಿದ ಇಂಗ್ಲೆಂಡ್ ಆಟಗಾರರಲ್ಲಿ ಕೇನ್ ಅಗ್ರಸ್ಥಾನದಲ್ಲಿದ್ದಾರೆ. ಗ್ಯಾರಿ ಲಿನೇಕರ್ 10 ಗೋಲುಗಳನ್ನು ಗಳಿಸಿದ್ದು ಈ ಹಿಂದಿನ ದಾಖಲೆಯಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News