IPL 2026 | ಮುಂಬೈ ಇಂಡಿಯನ್ಸ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ಸೇರ್ಪಡೆ
ಹಾರ್ದಿಕ್ ಪಾಂಡ್ಯ | Photo Credit: PTI
ಮುಂಬೈ, ಮೇ 7: ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ)ವಿರುದ್ಧ ರವಿವಾರ ನಡೆಯಲಿರುವ ಐಪಿಎಲ್ ಪಂದ್ಯಕ್ಕಿಂತ ಮೊದಲು ನಾಯಕ ಹಾರ್ದಿಕ್ ಪಾಂಡ್ಯ ರಾಯ್ಪುರದಲ್ಲಿ ತನ್ನ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿದ್ದಾರೆ.
ಲಕ್ನೊ ಸೂಪರ್ ಜಯಂಟ್ಸ್ ತಂಡದ ವಿರುದ್ಧ ಸೋಮವಾರ ಮುಂಬೈ ಇಂಡಿಯನ್ಸ್ ತಂಡ ಆಡಿದ್ದ ಹಿಂದಿನ ಪಂದ್ಯದಿಂದ ಪಾಂಡ್ಯ ವಂಚಿತರಾಗಿದ್ದರು. ಪಾಂಡ್ಯ ಅವರ ಗಾಯ ಗಂಭೀರವಾದುದಲ್ಲ, ಅವರಿಗೆ ವೈದ್ಯರು ಲಕ್ನೊ ವಿರುದ್ಧ ಪಂದ್ಯದಿಂದ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದರು.
‘ರಾಯ್ಪುರಕ್ಕೆ ತಲುಪಲಾಗಿದೆ’ ಎಂದು ಪಾಂಡ್ಯ ಅವರಿದ್ದ ಫೋಟೊದೊಂದಿಗೆ ಮುಂಬೈ ಇಂಡಿಯನ್ಸ್ ತಂಡ ಎಕ್ಸ್ ನಲ್ಲಿ ಬರೆದಿದೆ.
ಶಾಹೀದ್ ವೀರ್ ನಾರಾಯಣ ಸಿಂಗ್ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಸರ್ವ ಸಜ್ಜಿತ ತರಬೇತಿ ವ್ಯವಸ್ಥೆಯನ್ನು ಮಾಡಲಾಗಿದ್ದು, ಪಾಂಡ್ಯ ಅವರು ಶುಕ್ರವಾರ ನೆಟ್‌ನಲ್ಲಿ ಅಭ್ಯಾಸ ನಡೆಸುವ ಸಾಧ್ಯತೆಯಿದೆ.
ಏಳರಲ್ಲಿ ಸೋಲು ಹಾಗೂ ಮೂರರಲ್ಲಿ ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡವು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಪ್ಲೇ ಆಫ್ ಸ್ಥಾನವನ್ನು ಪಡೆಯುವ ವಿಶ್ವಾಸವನ್ನು ಉಳಿಸಿಕೊಳ್ಳಲು ತನ್ನ ಉಳಿದ ಎಲ್ಲ ನಾಲ್ಕು ಪಂದ್ಯಗಳನ್ನು ಗೆಲ್ಲುವ ಅಗತ್ಯವಿದೆ.