ಹ್ಯಾರಿ ಬ್ರೂಕ್ | Photo Credit : PTI 

ಲಂಡನ್: ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಹ್ಯಾರಿ ಬ್ರೂಕ್ 2026ರಲ್ಲಿ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿ ಮತ್ತೊಂದು ಮೈಲಿಗಲ್ಲು ತಲುಪಿದ್ದಾರೆ. ಕ್ಯಾಲೆಂಡರ್ ವರ್ಷದಲ್ಲಿ T20 ಕ್ರಿಕೆಟ್ನಲ್ಲಿ ಎರಡು ಬಾರಿ ಶತಕ ಗಳಿಸಿದ ಪೂರ್ಣ ಸದಸ್ಯ ತಂಡದ ಏಕೈಕ ನಾಯಕನೆಂಬ ಹೆಗ್ಗಳಿಕೆಗೆ ಪಾತ್ರರಾದರು.

ಬ್ರೂಕ್ ಮಂಗಳವಾರ ಶ್ರೀಲಂಕಾ ತಂಡದ ವಿರುದ್ಧ ನಡೆದ ಮೊದಲ T20 ಪಂದ್ಯದ ವೇಳೆ ಔಟಾಗದೆ 114 ರನ್ ಗಳಿಸುವ ಮೂಲಕ ಈ ಮೈಲಿಗಲ್ಲು ತಲುಪಿದ್ದಾರೆ. ಬ್ರೂಕ್ ಕೇವಲ 42 ಎಸೆತಗಳಲ್ಲಿ ಶತಕವನ್ನು ಪೂರೈಸಿದರು. 49 ಎಸೆತಗಳಲ್ಲಿ ಔಟಾಗದೆ 114 ರನ್ ಗಳಿಸಿದರು.

ಎಲೈಟ್ ಕಂಪನಿಗೆ ಬ್ರೂಕ್ ಸೇರ್ಪಡೆ

ಶತಕವೀರ ಬ್ರೂಕ್ ಅವರು ಕ್ಯಾಲೆಂಡರ್ ವರ್ಷದಲ್ಲಿ ಎಲ್ಲ ಮೂರು ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಂತ ಹೆಚ್ಚು ಶತಕಗಳನ್ನು ಗಳಿಸಿದ ಪೂರ್ಣ ಸದಸ್ಯ ತಂಡಗಳ ಆಟಗಾರರ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ.

2006ರಲ್ಲಿ ನಾಯಕನಾಗಿ ಏಳು ಶತಕಗಳನ್ನು ಗಳಿಸಿರುವ ರಿಕಿ ಪಾಂಟಿಂಗ್ ಟೆಸ್ಟ್ ಕ್ರಿಕೆಟ್ ನಲ್ಲಿ ದಾಖಲೆ ನಿರ್ಮಿಸಿದ್ದಾರೆ. ವಿರಾಟ್ ಕೊಹ್ಲಿ 2017 ಹಾಗೂ 2018ರಲ್ಲಿ ಏಕದಿನ ಕ್ರಿಕೆಟ್ನಲ್ಲಿ ಆರು ಶತಕಗಳನ್ನು ಸಿಡಿಸಿದ್ದರು. T20 ಕ್ರಿಕೆಟ್ನಲ್ಲಿ 2026ರಲ್ಲಿ ಎರಡು ಶತಕಗಳನ್ನು ಗಳಿಸಿದ ಏಕೈಕ ಆಟಗಾರನಾಗಿ ಬ್ರೂಕ್ ಹೊರಹೊಮ್ಮಿದ್ದಾರೆ.

ನಾಯಕನಾಗಿ T20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕ ಗಳಿಸಿದವರ ವಿಶೇಷ ಪಟ್ಟಿಯಲ್ಲಿ ಬ್ರೂಕ್ ಭಡ್ತಿ ಪಡೆದಿದ್ದಾರೆ. ಬ್ರೂಕ್ ಕೇವಲ 23 ಇನಿಂಗ್ಸ್ಗಳಲ್ಲಿ ಎರಡು ಬಾರಿ ಶತಕ ಗಳಿಸಿದ್ದಾರೆ. ರೋಹಿತ್ ಶರ್ಮಾ ಹಾಗೂ ಬಾಬರ್ ಆಝಂ ಕ್ರಮವಾಗಿ 62 ಹಾಗೂ 78 ಇನಿಂಗ್ಸ್ ಗಳಲ್ಲಿ ತಲಾ ಮೂರು ಶತಕಗಳನ್ನು ಬಾರಿಸಿದ್ದರು.

ಶ್ರೀಲಂಕಾ ತಂಡದ ವಿರುದ್ಧ ಶತಕ ಸಿಡಿಸಿದ ಬ್ರೂಕ್ ತಮ್ಮ ಶ್ರೇಷ್ಠ ಪ್ರದರ್ಶನ ಮುಂದುವರಿಸಿದರು. ತಮ್ಮ ಹಿಂದಿನ ಮೂರು T20 ಇನಿಂಗ್ಸ್ಗಳಲ್ಲಿ ಭಾರತದ ವಿರುದ್ಧ ಔಟಾಗದೆ 79, ಔಟಾಗದೆ 95 ಹಾಗೂ ಶ್ರೀಲಂಕಾ ವಿರುದ್ಧ ಔಟಾಗದೆ 114 ರನ್ ಗಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor