ಅರ್ಜೆಂಟೀನದ ಪರ ವಿದಾಯದ ಪಂದ್ಯವನ್ನಾಡಲು ಮೆಸ್ಸಿಗೆ ಅವಕಾಶ
ಲಿಯೊನೆಲ್ ಮೆಸ್ಸಿ | Photo Credit : PTI
ಬ್ಯುನಸ್‌ಐರಿಸ್: ಕೆಲವು ವಾರಗಳ ಹಿಂದೆ ಅಂತರ್‌ರಾಷ್ಟ್ರೀಯ ಫುಟ್ಬಾಲ್‌ನಿಂದ ನಿವೃತ್ತಿಯಾಗಿರುವ ಲಿಯೊನೆಲ್ ಮೆಸ್ಸಿಗೆ ಅಕ್ಟೋಬರ್‌ನಲ್ಲಿ ನಡೆಯಲಿರುವ ಪ್ರದರ್ಶನ ಪಂದ್ಯದಲ್ಲಿ ಅರ್ಜೆಂಟೀನ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ.
ಪ್ರದರ್ಶನ ಪಂದ್ಯವೊಂದರಲ್ಲಿ ಕೊನೆಯ ಬಾರಿ ಫುಟ್ಬಾಲ್ ಪಂದ್ಯವನ್ನಾಡುವಂತೆ ಸೂಪರ್‌ಸ್ಟಾರ್ ಮೆಸ್ಸಿಗೆ ಆಹ್ವಾನ ನೀಡಲಾಗಿದೆ ಎಂದು ಅರ್ಜೆಂಟೀನದ ಫುಟ್ಬಾಲ್ ಸಂಸ್ಥೆಯ(ಎಎಫ್‌ಎ)ಅಧ್ಯಕ್ಷ ಕ್ಲ್ಲಾಡಿಯೊ ಟಾಪಿಯಾ ದೃಢಪಡಿಸಿದ್ದಾರೆ.
‘‘ವಿಶ್ವದ ಅತ್ಯುತ್ತಮ ಆಟಗಾರ, ನಮ್ಮ ತಂಡದ ಐಕಾನ್ ಹಾಗೂ ನಾಯಕ ಲಿಯೊನೆಲ್ ಮೆಸ್ಸಿ ಅವರಿಗೆ ಅರ್ಜೆಂಟೀನದಲ್ಲಿಯೇ ಅಕ್ಟೋಬರ್ 6ರಂದು ಅರ್ಹವಾದ ವಿದಾಯದ ಪಂದ್ಯಕ್ಕಾಗಿ ನಾವು ಆಹ್ವಾನ ನೀಡಿದ್ದೇವೆ’’ಎಂದು ಟಾಪಿಯಾ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಅರ್ಜೆಂಟೀನವು ಸ್ವದೇಶದಲ್ಲಿ ಮೂರು ಸೌಹಾರ್ದ ಪಂದ್ಯಗಳನ್ನಾಡಲಿದೆ. ಮೆಸ್ಸಿ ಅವರು ಅ.6ರಂದು ಬ್ಯುನಸ್ ಐರಿಸ್‌ನಲ್ಲಿ ನಡೆಯಲಿರುವ ಬೆನಿನ್ ವಿರುದ್ಧದ ಪಂದ್ಯದಲ್ಲಿ ಆಡುವ ನಿರೀಕ್ಷೆ ಇದೆ.
ಅರ್ಜೆಂಟೀನ ತಂಡವು ಸೆ.30ರಂದು ಕೊರ್ಡೊಬಾದಲ್ಲಿ ಬೊಲಿವಿಯಾ ತಂಡವನ್ನು ಎದುರಿಸಿದ ನಂತರ ಅ.3ರಂದು ಬ್ಯುನಸ್ ಐರಿಸ್‌ನಲ್ಲಿ ಬುರ್ಕಿನಾ ತಂಡವನ್ನು ಎದುರಿಸಲಿದೆ.
ಫಿಫಾ ವಿಶ್ವಕಪ್ ಫೈನಲ್ ನಂತರ ಸ್ಪೇನ್ ಆಟಗಾರರೊಂದಿಗೆ ಸಂಘರ್ಷ ನಡೆಸಿದ್ದ ಲಿಯಾಂಡ್ರೊ ಪಾರೆಡೆಸ್, ಮೊಲಿನಾ ಹಾಗೂ ಥಿಯಾಗೊ ಅಲ್ಮಾಡಾರನ್ನು ದೀರ್ಘಕಾಲ ಅಮಾನತುಗೊಳಿಸಿದ ಕಾರಣ ಸೌಹಾರ್ದ ಪಂದ್ಯಗಳಿಗೆ ಲಭ್ಯವಿಲ್ಲ.