ಪ್ರತಿದಿನವೂ ಹೃದಯದಲ್ಲಿ ನೋವನ್ನಿಟ್ಟುಕೊಂಡು ಆಡುತ್ತಿದ್ದೇನೆ: ಯುದ್ಧಪೀಡಿತ ಉಕ್ರೇನ್ ಆಟಗಾರ್ತಿ ಕೊಸ್ಯುಕ್
Update: 2026-01-11 22:25 IST
Photo Credit: Reuters
ಬ್ರಿಸ್ಬೇನ್, ಜ. 11: ಪಂದ್ಯದಲ್ಲಿ ಸೋತ ಬಳಿಕ ಮಾತನಾಡಿದ ಕೊಸ್ಯುಕ್, ತನ್ನ ಯುದ್ಧಪೀಡಿತ ದೇಶದಲ್ಲಿರುವ ಜನರ ಬಗ್ಗೆ ಯೋಚಿಸುತ್ತಿದ್ದೇನೆ ಎಂದು ಹೇಳಿದರು.
“ನಾನು ಪ್ರತಿದಿನವೂ ಹೃದಯದಲ್ಲಿ ನೋವನ್ನಿಟ್ಟುಕೊಂಡು ಆಡುತ್ತಿದ್ದೇನೆ. ನನ್ನ ದೇಶ (ಉಕ್ರೇನ್)ದಲ್ಲಿ ಲಕ್ಷಾಂತರ ಮಂದಿ ಬೆಳಕು ಮತ್ತು ಬೆಚ್ಚಗಿನ ನೀರು ಇಲ್ಲದೆ ಬದುಕುತ್ತಿದ್ದಾರೆ,” ಎಂದು ಅವರು ಹೇಳಿದರು.
“ಉಕ್ರೇನ್ ನಲ್ಲಿ ಈಗ ಉಷ್ಣತೆ ಮೈನಸ್ 20 ಡಿಗ್ರಿ ಸೆಲ್ಸಿಯಸ್. ಅಲ್ಲಿ ಈ ಪರಿಸ್ಥಿತಿಯಲ್ಲಿ ಪ್ರತಿದಿನವೂ ಬದುಕುವುದು ಅತ್ಯಂತ ಯಾತನಾದಾಯಕ. ಇಲ್ಲಿ ಬ್ರಿಸ್ಬೇನ್ ತುಂಬಾ ಬಿಸಿಯಾಗಿದೆ. ಆದರೆ, ನನ್ನ ದೇಶದಲ್ಲಿ ನನ್ನ ಸಹೋದರಿ ಮೂರು ಚಾದರಗಳನ್ನು ಹೊದ್ದು ಮಲಗುತ್ತಾಳೆ. ಅಷ್ಟು ಶೀತಲವಾಗಿದೆ,” ಎಂದು ಕೊಸ್ಯುಕ್ ಹೇಳಿದರು.