×
Ad

ಬ್ರಿಸ್ಬೇನ್ ಇಂಟರ್ನ್ಯಾಶನಲ್ ಪ್ರಶಸ್ತಿ ಉಳಿಸಿಕೊಂಡ ಸಬಲೆಂಕಾ

Update: 2026-01-11 21:23 IST

PC :Reuters

ಬ್ರಿಸ್ಬೇನ್, ಜ. 11: ವಿಶ್ವದ ನಂಬರ್ ವನ್ ಆಟಗಾರ್ತಿ ಬೆಲಾರುಸ್ನ ಅರೈನಾ ಸಬಲೆಂಕಾ ಬ್ರಿಸ್ಬೇನ್ ಇಂಟರ್ನ್ಯಾಶನಲ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿದ್ದಾರೆ. ರವಿವಾರ ನಡೆದ ಫೈನಲ್ ನಲ್ಲಿ ಅವರು ಉಕ್ರೇನ್ ನ ಮಾರ್ಟಾ ಕೊಸ್ಯುಕ್ ಅವರನ್ನು 6-4, 6-3 ನೇರ ಸೆಟ್ಗಳಿಂದ ಪರಾಭವಗೊಳಿಸಿದರು.

ಇದರೊಂದಿಗೆ, ಮುಂಬರುವ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯಲ್ಲಿ ಪ್ರಶಸ್ತಿಯನ್ನು ಮರಳಿ ಗೆಲ್ಲಲು ಭರ್ಜರಿ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ.

ಮಾರ್ಟಾ ಕೊಸ್ಯುಕ್ ತನ್ನ ಫೈನಲ್ ಹಾದಿಯಲ್ಲಿ ಜೆಸ್ಸಿಕಾ ಪೆಗುಲಾ, ಮಿರಾ ಆ್ಯಂಡ್ರೀವ ಮತ್ತು ಅಮಾಂಡಾ ಅನಿಸಿಮೋವಾ ಸೇರಿದಂತೆ 10 ಉನ್ನತ ಆಟಗಾರರನ್ನು ಸೋಲಿಸಿದ್ದರು. ಆದರೆ, ಯುಎಸ್ ಓಪನ್ ಚಾಂಪಿಯನ್ ಸಬಲೆಂಕಾ ಅವರ ಸಾಮರ್ಥ್ಯಕ್ಕೆ ಸರಿಸಾಟಿಯಾಗಲು ಅವರಿಗೆ ಸಾಧ್ಯವಾಗಲಿಲ್ಲ.

ಕಳೆದ ವರ್ಷ ಆಸ್ಟ್ರೇಲಿಯನ್ ಓಪನ್ ಸಬಲೆಂಕಾ ಅವರ ಕೈತಪ್ಪಿತ್ತು. ಅದನ್ನು ಮರಳಿ ಪಡೆಯಲು ಅವರು ದೃಢ ನಿರ್ಧಾರ ಮಾಡಿದ್ದಾರೆ. ಬ್ರಿಸ್ಬೇನ್ ನ ಉಷ್ಣತೆಯಲ್ಲಿನ ತಮ್ಮ ನಿರ್ವಹಣೆಯ ಮೂಲಕ, ಈ ತಿಂಗಳು ಮೆಲ್ಬರ್ನ್ ಪಾರ್ಕ್ನಲ್ಲಿ ಪ್ರಶಸ್ತಿ ಗೆಲ್ಲುವ ಭರವಸೆಯನ್ನು ಅವರು ಮೂಡಿಸಿದ್ದಾರೆ.

ಆಸ್ಟ್ರೇಲಿಯನ್ ಓಪನ್ ಜನವರಿ 18ರಂದು ಆರಂಭಗೊಳ್ಳಲಿದೆ. ಸಬಲೆಂಕಾ ಅಲ್ಲಿ ತಮ್ಮ ಮೂರನೇ ಪ್ರಶಸ್ತಿಗಾಗಿ ಹೋರಾಡಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News