ಕಾರ್ಲೊಸ್ ಅಲ್ಕರಾಝ್ | Photo Credit : PTI  

ನ್ಯೂಯಾರ್ಕ್: ಗಾಯದಿಂದ ಚೇತರಿಸಿಕೊಂಡು ದೀರ್ಘ ಸಮಯದ ನಂತರ ಟೆನಿಸ್ ಅಂಗಣಕ್ಕೆ ಮರಳಿರುವ ಹಾಲಿ ಚಾಂಪಿಯನ್ ಕಾರ್ಲೊಸ್ ಅಲ್ಕರಾಝ್ ಹೆಚ್ಚು ಬೆವರು ಹರಿಸದೆ ಯುಎಸ್ ಓಪನ್ ಟೂರ್ನಿಯಲ್ಲಿ ಎರಡನೇ ಸುತ್ತಿಗೆ ಪ್ರವೇಶಿಸಿದರು.

ಸೋಮವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಸ್ಪೇನ್ ಆಟಗಾರ ಅಲ್ಕರಾಝ್ ರಶ್ಯದ ರೊಮನ್ ಸಫಿಯುಲಿನ್‌ರನ್ನು 6-4, 6-4, 6-4 ಸೆಟ್‌ಗಳಿಂದ ಸುಲಭವಾಗಿ ಮಣಿಸಿದರು. ಎಪ್ರಿಲ್ ನಂತರ ಮೊದಲ ಸಿಂಗಲ್ಸ್ ಪಂದ್ಯವನ್ನು ಗೆದ್ದುಕೊಂಡರು.

ಗಾಯಗೊಂಡಿರುವ ಜನ್ನಿಕ್ ಸಿನ್ನರ್ ಟೂರ್ನಿಯಿಂದ ಹಿಂದೆ ಸರಿದಿರುವುದು ಹಾಗೂ ನೊವಾಕ್ ಜೊಕೊವಿಕ್ ಮೊದಲ ಸುತ್ತಿನಲ್ಲಿ ಸೋತು ನಿರ್ಗಮಿಸಿರುವುದು ಅಲ್ಕರಾಝ್‌ರನ್ನು ಪ್ರಶಸ್ತಿ ಉಳಿಸಿಕೊಳ್ಳುವ ಫೇವರಿಟ್ ಆಟಗಾರನ್ನಾಗಿಸಿದೆ.

ಅಲ್ಕರಾಝ್ ಎರಡನೇ ಸುತ್ತಿನ ಪಂದ್ಯದಲ್ಲಿ ಪೋರ್ಚುಗಲ್‌ನ ಜೈಮಿ ಫರಿಯಾರನ್ನು ಎದುರಿಸಲಿದ್ದಾರೆ.

‘‘ಮತ್ತೊಮ್ಮೆ ಸ್ಪರ್ಧಿಸಲು ಶಕ್ತವಾಗಿದ್ದಕ್ಕೆ ನನಗೆ ನಿಜವಾಗಿಯೂ ಖುಷಿಯಾಗುತ್ತಿದೆ. ನನ್ನ ಮೊದಲ ಪಂದ್ಯದಲ್ಲಿ ನಾನು ಆಡಿರುವ ರೀತಿಯು ತುಂಬಾ ಸಂತಸವುಂಟು ಮಾಡಿದೆ’’ ಎಂದು ಅಲ್ಕರಾಝ್ ಹೇಳಿದ್ದಾರೆ.

ಈ ವರ್ಷದ ಯುಎಸ್ ಓಪನ್ ಟೂರ್ನಿಯು ಇನ್ನೋರ್ವ ಟಾಪ್-10 ಆಟಗಾರನ ನಿರ್ಗಮನಕ್ಕೆ ಸಾಕ್ಷಿಯಾಯಿತು. 2026ರ ಆವೃತ್ತಿಯ ಸಿನ್ಸಿನಾಟಿ ಪ್ರಶಸ್ತಿಯನ್ನು ಗೆದ್ದಿರುವ ಅರ್ಥರ್ ಫಿಲ್ಸ್ ಅವರು ಗ್ರೀಕ್ ಆಟಗಾರ ಸ್ಟೆಫನೊಸ್ ಸಿಟ್ಸಿಪಾಸ್‌ರನ್ನು 4-6, 7-6(3), 6-1, 6-4 ಸೆಟ್‌ಗಳಿಂದ ಮಣಿಸಿ ಶಾಕ್ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor