ಮುಂಬೈ ಇಂಡಿಯನ್ಸ್ ಕೋಚ್ ಆಗಿ ಜಯವರ್ಧನೆ ಮುಂದುವರಿಕೆ ಸಾಧ್ಯತೆ
ಮಹೇಲ ಜಯವರ್ಧನೆ | Photo Credit : PTI
ಹೊಸದಿಲ್ಲಿ: ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಲ ಜಯವರ್ಧನೆ 2027ರ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಆಗಿ ಮುಂದುವರಿಯುವ ಸಾಧ್ಯತೆಯಿದೆ.
ಜಯವರ್ಧನೆ 2024ರಲ್ಲಿ ಎರಡು ಪ್ಲಸ್ ಒಂದು ಗುತ್ತಿಗೆಯ ಆಧಾರದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ತಂಡವನ್ನು ಸೇರ್ಪಡೆಯಾಗಿದ್ದಾರೆ. ಜಯವರ್ಧನೆ ಇನ್ನೊಂದು ವರ್ಷ ಮುಂದುವರಿಯುವ ಬಗ್ಗೆ ಮುಂದಿನ ತಿಂಗಳು ಅಧಿಕೃತ ಪ್ರಕಟನೆ ಹೊರಬರುವ ನಿರೀಕ್ಷೆ ಇದೆ.
ಜಯವರ್ಧನೆ ಮಾರ್ಗದರ್ಶನದಲ್ಲಿ ಮುಂಬೈ ತಂಡವು 2025ರಲ್ಲಿ ಪ್ಲೇ ಆಫ್ ಹಂತಕ್ಕೆ ತಲುಪಿತ್ತು. ಆದರೆ ಮರು ವರ್ಷ 9ನೇ ಸ್ಥಾನಕ್ಕೆ ಕುಸಿದಿತ್ತು. ಐಪಿಎಲ್‌ನ ದೈತ್ಯ ತಂಡಕ್ಕೆ 2026ರ ಋತು ಅತ್ಯಂತ ನಿರಾಶಾದಾಯಕವಾಗಿತ್ತು. ಮುಂಬೈ ತಂಡವು ಆಟಗಾರರ ಗಾಯಾಳು ಸಮಸ್ಯೆಗಳನ್ನು ಎದುರಿಸಿದ್ದಲ್ಲದೆ ಕೇವಲ 4 ಪಂದ್ಯಗಳನ್ನು ಗೆದ್ದಿತ್ತು.
ಈ ವರ್ಷ ಕಳಪೆ ಪ್ರದರ್ಶನ ನೀಡಿದ ನಂತರ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗುತ್ತಿದ್ದು, ನಾಯಕ ಹಾರ್ದಿಕ್ ಪಾಂಡ್ಯ ತಂಡದಿಂದ ಒಂದು ಹೆಜ್ಜೆ ಹೊರಗಿಟ್ಟಿದ್ದಾರೆ.