Photo: AP

ಟೌರಂಗಾ: ಬೌಲರ್‌ ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ನ್ಯೂಝಿಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡವು 22 ರನ್‌ ಗಳ ಜಯ ದಾಖಲಿಸಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯನ್ನು 3-1 ಅಂತರದಲ್ಲಿ ತನ್ನದಾಗಿಸಿಕೊಂಡಿದೆ.

ರವಿವಾರ ಬೇ ಓವಲ್‌ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 42.1 ಓವರ್‌ ಗಳಲ್ಲಿ 209 ರನ್‌ಗಳಿಗೆ ಆಲೌಟ್ ಆಯಿತು. 210 ರನ್‌ಗಳ ಗುರಿ ಬೆನ್ನಟ್ಟಿದ ಆತಿಥೇಯ ನ್ಯೂಝಿಲೆಂಡ್ ತಂಡವು 48.1 ಓವರ್‌ ಗಳಲ್ಲಿ 187 ರನ್‌ ಗಳಿಗೆ ಆಲೌಟ್ ಆಯಿತು.

ಭಾರತದ ಬ್ಯಾಟಿಂಗ್‌ ನಲ್ಲಿ ಇಶಾನ್ ಕಿಶನ್ ಮತ್ತು ಅಕ್ಷರ್ ಪಟೇಲ್ ತಲಾ 46 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಇಶಾನ್ 58 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಬಾರಿಸಿದರೆ, ಅಕ್ಷರ್ 55 ಎಸೆತಗಳಲ್ಲಿ 5 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ ರನ್ ಗಳಿಸಿದರು. ಇಬ್ಬರೂ ಅರ್ಧಶತಕದ ಅಂಚಿನಲ್ಲಿ ವಿಕೆಟ್ ಕಳೆದುಕೊಂಡರು.

ಶ್ರೇಯಸ್ ಅಯ್ಯರ್ ಮತ್ತು ನಮನ್ ಧೀರ್ ತಲಾ 22 ರನ್ ಗಳಿಸಿದರು. ಋತುರಾಜ್ ಗಾಯಕ್ವಾಡ್ 18 ರನ್ ಗಳಿಸಿದರು. ಮುಹಮ್ಮದ್ ಸಿರಾಜ್ 20 ಎಸೆತಗಳಲ್ಲಿ 14 ರನ್ ಗಳಿಸಿದರೆ, ಅರ್ಷದೀಪ್ ಸಿಂಗ್ ಕೇವಲ 4 ಎಸೆತಗಳಲ್ಲಿ 2 ಸಿಕ್ಸರ್ ಸಹಿತ 14 ರನ್ ಸಿಡಿಸಿದರು.

ರೋಹಿತ್ ಶರ್ಮಾ 7, ವಿರಾಟ್ ಕೊಹ್ಲಿ 5 ಹಾಗೂ ಆಕಿಬ್ ನಬಿ 5 ರನ್ ಗಳಿಸಿದರು.

ನ್ಯೂಝಿಲೆಂಡ್ ಪರ ಮಿಚೆಲ್ ಸ್ಯಾಂಟ್ನರ್ ಮತ್ತು ಜೇಕಬ್ ಡಫಿ ತಲಾ 3 ವಿಕೆಟ್ ಪಡೆದರು. ಮ್ಯಾಥ್ಯೂ ಫಿಶರ್ 2 ವಿಕೆಟ್ ಕಬಳಿಸಿದರೆ, ಬ್ಲೇರ್ ಟಿಕ್ನರ್ ಮತ್ತು ಮೈಕೆಲ್ ಬ್ರೇಸ್‌ ವೆಲ್ ತಲಾ ಒಂದು ವಿಕೆಟ್ ಪಡೆದರು.

ಅರ್ಷದೀಪ್ ದಾಳಿಗೆ ಕುಸಿದ ಕಿವೀಸ್

210 ರನ್‌ ಗಳ ಗುರಿ ಬೆನ್ನಟ್ಟಿದ ನ್ಯೂಝಿಲೆಂಡ್‌ ಗೆ ಭಾರತದ ಬೌಲರ್‌ ಗಳು ರನ್ ಗಳಿಸಲು ಅವಕಾಶ ನೀಡಲಿಲ್ಲ. ಡೀನ್ ಫಾಕ್ಸ್‌ ಕ್ರಾಫ್ಟ್ 42 ಎಸೆತಗಳಲ್ಲಿ 5 ಬೌಂಡರಿ ಸಹಿತ 31 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು.

ನಿಕ್ ಕೆಲ್ಲಿ ಮತ್ತು ನಾಯಕ ಮಿಚೆಲ್ ಸ್ಯಾಂಟ್ನರ್ ತಲಾ 24 ರನ್ ಗಳಿಸಿದರೆ, ವಿಲ್ ಯಂಗ್ 22 ರನ್ ಗಳಿಸಿದರು. ಮೈಕೆಲ್ ಬ್ರೇಸ್‌ವೆಲ್ 19, ಕ್ರಿಸ್ಟಿಯನ್ ಕ್ಲಾರ್ಕ್ 16, ಟಿಮ್ ಸೈಫರ್ಟ್ ಮತ್ತು ಬ್ಲೇರ್ ಟಿಕ್ನರ್ ತಲಾ 14 ರನ್ ಗಳಿಸಿದರು. ಜೇಕಬ್ ಡಫಿ 9, ಮ್ಯಾಥ್ಯೂ ಫಿಶರ್ 3 ಹಾಗೂ ಫಿನ್ ಅಲೆನ್ ಒಂದು ರನ್ ಗಳಿಸಿದರು.

ಭಾರತದ ಪರ ಅರ್ಷದೀಪ್ ಸಿಂಗ್ 10 ಓವರ್‌ ಗಳಲ್ಲಿ 30ರನ್ ನೀಡಿ 3 ವಿಕೆಟ್ ಕಬಳಿಸಿದರು. ಅಕ್ಷರ್ ಪಟೇಲ್ 28 ರನ್ ನೀಡಿ 2 ವಿಕೆಟ್ ಪಡೆದರೆ, ಮುಹಮ್ಮದ್ ಸಿರಾಜ್ 50ರನ್ ನೀಡಿ 2 ವಿಕೆಟ್ ಪಡೆದರು. ಔಕಿಬ್ ನಬಿ, ಯಶ್ ಠಾಕೂರ್ ಮತ್ತು ನಮನ್ ಧೀರ್ ತಲಾ ಒಂದು ವಿಕೆಟ್ ಕಬಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Contributor - ಸದಾನಂದ ಗಂಗನಬೀಡು

contributor