Asian Games | MMA ಸೆಮಿಫೈನಲ್: ಡ್ರಾ ಬಳಿಕ ಸೋತರೂ ಕಂಚಿನೊಂದಿಗೆ ಐತಿಹಾಸಿಕ ಸಾಧನೆ ಮಾಡಿದ ಭಾರತದ ಸುಚಿಕಾ ತರಿಯಾಲ್
ಸುಚಿಕಾ ತರಿಯಾಲ್ | Photo Credit : X
ಹೊಸದಿಲ್ಲಿ: ಭಾರತದ ಸುಚಿಕಾ ತರಿಯಾಲ್ ಅವರು ಸೋಮವಾರ ಏಷ್ಯನ್ ಗೇಮ್ಸ್‌ನ ಮಹಿಳೆಯರ ಸಾಂಪ್ರದಾಯಿಕ 60 ಕೆಜಿ 'ಮಿಕ್ಸೆಡ್ ಮಾರ್ಷಲ್ ಆರ್ಟ್ಸ್' ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
ಸಿಂಗಾಪುರದ ಹುಯಿ ಹೂನ್ ಟಿಯೊ ವಿರುದ್ಧದ ಅವರ ಸೆಮಿಫೈನಲ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತ್ತು. ಆದರೆ, ದೇಹದ ತೂಕ ಕಡಿಮೆ ಇದ್ದ ಕಾರಣ ಟಿಯೊ ಅವರನ್ನು ವಿಜೇತೆ ಎಂದು ಘೋಷಿಸಲಾಯಿತು. ಇದರಿಂದ ಟಿಯೊ ಫೈನಲ್‌ಗೆ ಪ್ರವೇಶಿಸಿದರು.
ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಸೇರ್ಪಡೆಗೊಂಡ MMA ವಿಭಾಗದಲ್ಲಿ ಭಾರತಕ್ಕೆ ಲಭಿಸಿದ ಮೊದಲ ಪದಕ ಇದಾಗಿದೆ.
ಆದರೆ, ಫಲಿತಾಂಶದಿಂದ ಸುಚಿಕಾ ತಾರಿಯಾಲ್ ತೀವ್ರವಾಗಿ ನಿರಾಶೆಗೊಂಡರು. ಅಂತಿಮ ತೀರ್ಪನ್ನು ಟಿಯೊ ಪರವಾಗಿ ಪ್ರಕಟಿಸಿದ ಬಳಿಕ, ಅವರು ಮ್ಯಾಟ್‌ನಲ್ಲೇ ಕಣ್ಣೀರಿಡುತ್ತಾ ದುಃಖ ವ್ಯಕ್ತಪಡಿಸಿದರು.
ಈ ಕಂಚಿನ ಪದಕದೊಂದಿಗೆ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.
ಇದುವರೆಗೆ ಶೂಟಿಂಗ್‌ನಲ್ಲಿ ಭಾರತ ನಾಲ್ಕು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಗೆದ್ದುಕೊಂಡಿದೆ.