×
Ad

IPL 2026| ಗಾಯಗೊಂಡ ಜೇಮೀ ಓವರ್‌ಟನ್ ಹೆಚ್ಚಿನ ಚಿಕಿತ್ಸೆಗಾಗಿ ಬ್ರಿಟನ್‌ಗೆೆ ವಾಪಸ್

Update: 2026-05-14 21:42 IST

ಜೇಮೀ ಓವರ್‌ಟನ್ | Photo Credit : PTI  

ಮುಂಬೈ, ಮೇ 14: ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಆಲ್‌ರೌಂಡರ್ ಜೇಮೀ ಓವರ್‌ಟನ್ ತೊಡೆ ಗಾಯಕ್ಕೆ ಒಳಗಾಗಿದ್ದು, ಹೆಚ್ಚಿನ ತಪಾಸಣೆ ಮತ್ತು ಚಿಕಿತ್ಸೆಗಾಗಿ ಬ್ರಿಟನ್‌ಗೆ ಮರಳಿದ್ದಾರೆ ಎಂದು ಅವರ ತಂಡ ಬುಧವಾರ ಪ್ರಕಟಿಸಿದೆ.

ಈ ಬಾರಿಯ ಐಪಿಎಲ್ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗಾಯದ ಸಮಸ್ಯೆಗಳನ್ನು ಎದುರಿಸಿದೆ. ಈಗ ಈ ಪಟ್ಟಿಗೆ ಇಂಗ್ಲೆಂಡ್‌ನ ಈ ಆಟಗಾರ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.

32 ವರ್ಷದ ಓವರ್‌ಟನ್ ಎಷ್ಟು ದಿನಗಳ ಕಾಲ ಮೈದಾನದಿಂದ ಹೊರಗುಳಿಯಲಿದ್ದಾರೆ ಎಂಬ ಬಗ್ಗೆ ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ತಂಡವು ಹೇಳಿಲ್ಲ.

ಪ್ರಸಕ್ತ ಋತುವಿನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಪ್ರಭಾವಶಾಲಿ ಪ್ರದರ್ಶನ ನೀಡುತ್ತಿರುವ ಓವರ್‌ಟನ್ ಅವರ ಅನುಪಸ್ಥಿತಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.

ಡಯಾನ್ ಫಾರೆಸ್ಟರ್ ನೇಮಕ: ಗಾಯಗೊಂಡಿರುವ ಜೇಮೀ ಓವರ್‌ಟನ್‌ರ ಸ್ಥಾನಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಗುರುವಾರ ದಕ್ಷಿಣ ಆಫ್ರಿಕದ ಆಲ್‌ರೌಂಡರ್ ಡಯಾನ್ ಫಾರೆಸ್ಟರ್‌ರನ್ನು ಹೆಸರಿಸಿದೆ.

ಫಾರೆಸ್ಟರ್ 75 ಲಕ್ಷ ರೂಪಾಯಿ ಬೆಲೆಗೆ ತಂಡಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಐಪಿಎಲ್ ಗುರುವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಫಾರೆಸ್ಟರ್ ಈ ವರ್ಷದ ಮಾರ್ಚ್‌ನಲ್ಲಿ ದಕ್ಷಿಣ ಆಫ್ರಿಕ ತಂಡದ ಪರವಾಗಿ ಚೊಚ್ಚಲ ಪಂದ್ಯ ಆಡಿದ್ದರು. ಅವರು ನ್ಯೂಝಿಲ್ಯಾಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ 83 ರನ್‌ಗಳನ್ನು ಗಳಿಸಿದ್ದರು.

ಅದೂ ಅಲ್ಲದೆ, ಫಾರೆಸ್ಟರ್ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ರಾವಲ್ಪಿಂಡೀಝ್ ಪರವಾಗಿ ಆಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News